ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಕೆಳಕಂಡ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವ ಕುರಿತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ದೃಢಿಕೃತ ಶೈಕ್ಷಣಿಕ ದಾಖಲಾತಿಗಳೊಂದಿಗೆ ನ.17 ರೊಳಗೆ ಅರ್ಜಿಯನ್ನು ಜಿಲ್ಲಾ ಕಚೆÃರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಸನ ಇಲ್ಲಿಗೆ ಸಲ್ಲಿಸುವುದು.
ಶಾಲೆಗಳ ವಿವರ: ಮೌಲಾನಾ ಆಜಾದ್ ಮಾದರಿ ಶಾಲೆ, ಹಾಸನ ತಾ||, ಗಣಿತ ವಿಷಯದ ಕುರಿತು (ಆಂಗ್ಲ ಮಾಧ್ಯಮ) ಶೈಕ್ಷಣಿಕ ಅರ್ಹತೆ ಬಿ.ಎಸ್ಸಿ. ಬಿ.ಎಡ್, ಮೌಲಾನಾ ಆಜಾದ್ ಮಾದರಿ ಶಾಲೆ, ಸಕಲೇಶಪುರ, ಇಂಗ್ಲೀಷ್ ವಿಷಯದ ಕುರಿತು ಶೈಕ್ಷಣಿಕ ಅರ್ಹತೆ ಬಿ.ಎ ಬಿ.ಎಡ್, ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಹಾಲುವಾಗಿಲು, ಹಾಸನ ತಾಲ್ಲೂಕು. ಕನ್ನಡ ವಿಷಯದ ಕುರಿತು ಶೈಕ್ಷಣಿಕ ಅರ್ಹತೆ ಬಿ.ಎ ಬಿ.ಎಡ್, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅರಕಲಗೂಡು ಉರ್ದು ವಿಷಯದ ಕುರಿತು ಶೈಕ್ಷಣಿಕ ಅರ್ಹತೆ ಬಿ.ಎ ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಆಕಾಶವಾಣಿ ಹಿಂಭಾಗ, ಹಾಸನ. ದೂರವಾಣಿ ಸಂಖ್ಯೆ: 08172-268373/08172-267373 ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
