ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿರುವ ಘಟನೆ ಬಗ್ಗೆ ತನಿಖಾ ತಂಡ ತನಿಖೆ ಚುರುಕುಗೊಳಿಸಿದ್ದು, ದಿನದಿಂದ ದಿನಕ್ಕೆ ಆಘಾತಕಾರಿ ಮಾಹಿತಿ ಬಹಿರಂಗವಾಗುತ್ತಿದೆ.
ದೆಹಲಿ ಸ್ಫೋಟದಲ್ಲಿ ಬಳಸಿದ್ದು ಎರಡು ಕಾರಲ್ಲ, ಮೂರು ಕಾರು ಎಂದು ತಿಳೀದಿಬಂದಿದೆ. ಶಂಕಿತ ಉಗ್ರ ಡಾ.ಉಮರ್ ನಬಿಗೆ ಸೇರಿದ ಮೂರು ಕಾರುಗಳ ಜಾಲ ಈಗ ಬೆಳಕಿಗೆ ಬಂದಿದೆ. ಇಕೋ ಸ್ಫೋರ್ಟ್ಸ್ ಕಾರು ಸಿಕ್ಕ ಬಳಿಕ ಮತ್ತೊಂದು ಕಾರಿನ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಕಾರಿಗಾಗಿ ಶೋಧ ನಡೆಸಲಾಗುತ್ತಿದೆ.
ಫರಿದಾಬಾದ್ ನಲ್ಲಿ ಇಕೋ ಸ್ಫೋರ್ಟ್ಸ್ ಕಾರು ಸಿಕ್ಕಿದ್ದು, ಬಿಳಿ ಬಣ್ಣದ ಬ್ರೆಝಾ ಕಾರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರನ್ನು ಉಗ್ರ ಚಟುವಟಿಕೆಗಳಿಗೆ ಬಳಸಿದ್ದ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.
