BREAKING: EPFO ಸೊಸೈಟಿಯಲ್ಲಿ 70 ಕೋಟಿ ವಂಚನೆ ಪ್ರಕರಣ: ಅಕೌಂಟೆಂಟ್ ಮನೆ ಮೇಲೆ ಪೊಲೀಸರ ದಾಳಿ

ಬೆಂಗಳೂರು: ಇಪಿಎಫ್ ಒ ಸೊಸೈಟಿಯಲ್ಲಿ 70 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸೊಸೈಟಿಯ ಅಕೌಂಟೆಂಟ್ ಜಗದೀಶ್ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಇಪಿಎಫ್ ಒ ಸೊಸೈಟಿ ಅಕೌಂಟೆಂಟ್ ಆಗಿದ್ದ ಜಗದೀಶ್ ಅವರ ಬೆಂಗಳೂರಿನ ಅಂಜನಾಪುರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. 21 ಸಾವಿರ ಸಂಬಳ ಪಡೆಯುತ್ತಿದ್ದ ಅಕೌಂಟೆಂಟ್ ಜಗದೀಶ್, 5 ಕೋಟಿ ರೂ ಮನೆ ನಿರ್ಮಿಸಿದ್ದಾರೆ. ಅಲ್ಲದೇ ಬೆಂಗಳೂರಿನ ದಕ್ಷಿಣ ಜಿಲ್ಲೆಯ ಹಲವೆಡೆ ಆಸ್ತಿ ಖರೀದಿ ಮಾಡಿದ್ದಾರೆ ಎಂಬುದು ದಾಳಿ ವೇಳೆ ಪತ್ತೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read