ನವದೆಹಲಿ: ದೆಹಲಿಯಲ್ಲಿ ಕಾರ್ ಬಾಂಬ್ ಸ್ಫೋಟ ಪ್ರಕರಣದ ಉಗ್ರ ಡಾ.ಉಮರ್ ಉನ್ ನಬಿ ಬಗ್ಗೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಆತ ಜೈಷ್-ಎ-ಮೊಹಮ್ಮದ್ ಲಾಜೆಸ್ಟಿಕ್ ಮಾಡ್ಯೂಲ್ ಜೊತೆ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ.
ಉಗ್ರ ಡಾ.ಉಮರ್ ಹರಿಯಾಣ, ಫರಿದಾಬಾದ್, ದಕ್ಷಿಣ ಕಾಶ್ಮೀರ, ಉತ್ತರ ಪ್ರದೇಶದ ಲಖನೌ ನಡುವೆ ಕಾರ್ಯನಿರ್ವಹಿಸುತ್ತಿದ್ದ.
9-10 ಸದಸ್ಯರು ಇದ್ದ ತಂಡದಲ್ಲಿ ಉಗ್ರ ಡಾ.ಉಮರ್ ಸೇರ್ಪಡೆಯಾಗಿದ್ದ. ಲಾಜೆಸ್ಟಿಕ್ ಮಾಡ್ಯೂಲ್ ನಲ್ಲಿ ಐದರಿಂದ ಆರು ವೈದ್ಯರು ಇದ್ದರು. ವೈದ್ಯರನ್ನು ಬಳಸಿಕೊಂಡು ಸ್ಫೋಟಕ ವಸ್ತುಗಳನ್ನು ಖರೀದಿಸುತ್ತಿದ್ದರು.
ಫರಿದಾಬಾದ್, ದೆಹಲಿ ನಡುವೆ ಡಾ.ಉಮರ್ ಆಗಾಗ ಪ್ರಯಾಣಿಸುತ್ತಿದ್ದ ದೆಹಲಿಯ ರಾಮಲೀಲಾ ಮೈದಾನ, ಸುನೇಹ್ರಿ ಬಳಿಯ ಮಸೀದಿಗೆ ಭೇಟಿ ನೀಡುತ್ತಿದ್ದ ಎಂದು ತನಿಖೆ ವೇಳೆ ಬಹಿರಂಗವಾಗಿದೆ.
