ಶಿವಮೊಗ್ಗ : ಮಾಜಿ ಸೈನಿಕರ ಕಲ್ಯಾಣ ಯೋಜನೆಗಳಿಗೆ ಪೂರಕವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸೈನಿಕ ಮಂಡಳಿಯನ್ನು ಪುನರ್‌ರಚಿಸಲಾಗುತ್ತಿದೆ. ಪ್ರತಿ ಜಿಲ್ಲೆಯಿಂದ ಓರ್ವ ಮಾಜಿ ಸೈನಿಕರು ಅಧಿಕಾರೇತರ ಸದಸ್ಯರಾಗಿ ಪ್ರತಿನಿಧಿಸಬಹುದಾಗಿದ್ದು, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಮಾಜಿ ಸೈನಿಕರು ಮಂಡಳಿಯಲ್ಲಿ ವೇತನ-ಭತ್ಯೆ ರಹಿತವಾಗಿ ಸ್ವ-ಇಚ್ಛೆಯಿಂದ ಕಾರ್ಯ ನಿರ್ವಹಿಸಲು ಆಸಕ್ತಿಯುಳ್ಳವರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ತಮ್ಮ ಸ್ವವಿವರಗಳನ್ನೊಳಗೊಂಡ ಅರ್ಜಿಯನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ನ. 15ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220925 ನ್ನು ಸಂಪರ್ಕಿಸುವುದು.
