ಚೆನ್ನೈ: ಯುವಕನೊಬ್ಬ ನೈರ್ಮಲ್ಯ ಕಾರ್ಯಕರ್ತೆಯ ಮುಂದೆ ಪ್ಯಾಂಟ್ ಬಿಚ್ಚಿ ಅಸಬ್ಯವಾಗಿ ವರ್ತಿಸಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಅಡ್ಯಾರ್ ಸೇತುವೆ ಬಳಿ ನೈರ್ಮಲ್ಯ ಕಾರ್ಯಕರ್ತೆ ಸ್ವಚ್ಛಾತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಯುವಕನೊಬ್ಬ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ತಕ್ಷಣ ಮಹಿಳೆ ತನ್ನ ಕೈಲಿದ್ದ ಪೊರಕೆಯಲ್ಲಿಯೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಗ್ರಹಚಾರ ಬಿಡಿಸಿದ್ದಾರೆ.
ಅಡ್ಯಾರ್ ಸೇತುವೆ ಬಳಿ ನೈರ್ಮಲ್ಯ ಕಾರ್ಯಕರ್ತೆ ಕಸ ಗುಡಿಸುತ್ತಿದ್ದರು. ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದಿದ್ದ ಯುವಕ ನೈರ್ಮಲ್ಯ ಕಾರ್ಯಕರ್ತೆಯ ಮುಂದೆ ಬೈಕ್ ನಿಲ್ಲಿಸಿದ್ದಾನೆ. ಬೈಕ್ ತೆಗೆಯಿರಿ ಸ್ವಚ್ಚ ಮಾಡಬೇಕು ಎಂದು ನೈರ್ಮಲ್ಯಕಾರ್ಯಕರ್ತೆ ಹೇಳುತ್ತಿದ್ದಂತೆ ತಲೆ ಅಲ್ಲಾಡಿಸುತ್ತಾ ವಿಚಿತ್ರವಾರಿ ವರ್ತಿಸಲಾರಂಭಿಸಿದ್ದಾನೆ. ಬೈಕ್ ನಿಂದ ಇಳಿದು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಗಾಬರಿಯಾದರೂ ಹೆದರದ ಮಹಿಳೆ ತಕ್ಷ ತನ್ನ ಕೈಲಿದ್ದ ಪೊರಕೆಯಿಂದ ಥಳಿಸಿದ್ದಾರೆ. ಮಹಿಳೆ ಕೊಟ್ಟ ಏಟಿಗೆ ಯುವಕ ಸ್ಥಳದಿಂದ ಓಡಿ ಹೋಗಿದ್ದಾನೆ.
ಘಟನೆ ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ರಸ್ತೆ ಬದಿ ನಿಂತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿಯೂ ಸೆರೆಯಾಗಿದೆ.
