ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಮಹಿಳಾ ವೈದ್ಯೆ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ಕೆಂಪುಕೋಟೆ ಬಳಿ ಮೆಟ್ರೋ ನಿಲ್ದಾಣದ ಬಳಿ ನಿನ್ನೆ ಸಂಜೆ i20 ಕಾರು ಸ್ಫೋಟ ಪ್ರಕರಣದಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕೃತ್ಯದ ಹಿಂದೆ ಮಹಿಳಾ ಉಗ್ರರು, ವೈಟ್ ಕಾಲರ್ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಇಬ್ಬರು ವೈದ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಡಾ.ಶಾಹಿನ್ ಎಂಬ ಮಹಿಳೆ ಹಾಗೂ ಡಾ.ಸಜ್ಜದ್ ಎಂಬ ವೈದ್ಯನನ್ನು ಬಂಧಿಸಲಾಗಿದೆ. ಡಾ. ಶಾಹಿನ್ ವೃತ್ತಿಯಲ್ಲಿ ವೈದ್ಯೆಯಾಗಿದ್ದುಕೊಂಡೇ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಳು. ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಲಿಂಕ್ ನಲ್ಲಿದ್ದಳು. ಅದರ ಭಾಗವಾಗಿರುವ ಜಮಾತ್-ಉಲ್-ಮೊಹಿನ್ ಸಂಘಟೆಯಲ್ಲಿ ಈಕೆ ಗುರುತಿಸಿಕೊಂಡಿದ್ದು, ಈ ಸಂಘಟನೆ ಪಾಕಿಸ್ತಾನದಲ್ಲಿ ಆಕ್ಟಿವ್ ಆಗಿದೆ ಎಂದು ತಿಳಿದುಬಂದಿದೆ.
ಇನ್ನು ಡಾ. ಸಜ್ಜದ್ ಎಂಬ ವೈದ್ಯನನ್ನು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ.
