ಬೆಂಗಳೂರು : ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿ.ವೈ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಕೂಡಲೇ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.ಪ್ರತಿಭಟನೆ ನಡೆಸುತ್ತಿದ್ದ ಬಿ.ವೈ ವಿಜಯೇಂದ್ರ, ಆರ್. ಅಶೋಕ್ ಸೇರಿ ಹಲವು BJP ನಾಯಕರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಲಾಗಿದೆ.
ಬಿಜೆಪಿ ಕಿಡಿ
ಜೈಲಿನಲ್ಲಿರುವ ಅಪರಾಧಿಗಳು, ಭಯೋತ್ಪಾದಕರಿಗಾಗಿ ಕಾಂಗ್ರೆಸ್ ಸರ್ಕಾರ ಆರನೇ ಗ್ಯಾರಂಟಿ ಜಾರಿಗೊಳಿಸಿದೆ ಎಂದು ಬಿಜೆಪಿ ಕಿಡಿಕಾರಿದೆ. ಪರಪ್ಪನ ಅಗ್ರಹಾರ ಜೈಲನ್ನು ರೆಸಾರ್ಟ್ ಆಗಿ ಪರಿವರ್ತಿಸಿರುವ @INCKarnataka
ಸರ್ಕಾರ ಅಲ್ಲಿನ ಖೈದಿಗಳಿಗೆ ಐಷಾರಾಮಿ ಜೀವನ, ಐಟಂ ಸಾಂಗ್ ಭಾಗ್ಯ ದಯಪಾಲಿಸಿದೆ.! ಜೈಲಿನ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ರೇಪಿಸ್ಟ್ ಗಳು, ಸ್ಮಗ್ಲರ್ ಗಳು ಹಾಗೂ ಉಗ್ರರಿಗೆ ಮಾದಕ ವಸ್ತು, ಟಿವಿ, ಮೊಬೈಲು, ಇಂಟರ್ನೆಟ್, ಮದ್ಯ ಸರಬರಾಜು ಆಗುತ್ತಿದೆ. ಹಾಗೇ ಸಮಾಜಘಾತುಕರ ಮೋಜು-ಮಸ್ತಿ ಎಗ್ಗಿಲ್ಲದೆ ನಡೆಯುತ್ತಿದ್ದರೂ ʼಗೊತ್ತಿಲ್ಲʼ ಗೃಹ ಸಚಿವ@DrGParameshwara ಅವರು ಗಾಢ ನಿದ್ರೆಗೆ ಜಾರಿದ್ದಾರೆ. ಅಸಮರ್ಥ ಸಿಎಂ@siddaramaiah
ಹಾಗೂ ನಿಷ್ಪ್ರಯೋಜಕ ಗೃಹಮಂತ್ರಿ ಪರಮೇಶ್ವರ್ ಅವರ ವಿಫಲ ಕಾರ್ಯವೈಖರಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದಿದೆ.
ಪರಪ್ಪನ ಅಗ್ರಹಾರ ಜೈಲನ್ನು ರೆಸಾರ್ಟ್ ಆಗಿ ಪರಿವರ್ತಿಸಿರುವ @INCKarnataka ಸರ್ಕಾರ ಅಲ್ಲಿನ ಖೈದಿಗಳಿಗೆ ಐಷಾರಾಮಿ ಜೀವನ, ಐಟಂ ಸಾಂಗ್ ಭಾಗ್ಯ ದಯಪಾಲಿಸಿದೆ.!
— BJP Karnataka (@BJP4Karnataka) November 10, 2025
ಜೈಲಿನ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ರೇಪಿಸ್ಟ್ ಗಳು, ಸ್ಮಗ್ಲರ್ ಗಳು ಹಾಗೂ ಉಗ್ರರಿಗೆ ಮಾದಕ ವಸ್ತು, ಟಿವಿ, ಮೊಬೈಲು, ಇಂಟರ್ನೆಟ್, ಮದ್ಯ ಸರಬರಾಜು ಆಗುತ್ತಿದೆ. ಹಾಗೇ… pic.twitter.com/uQwMf58OWs
