ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ವಿಡಿಯೋ ವೈರಲ್ ಬೆನ್ನಲ್ಲೇ ನಟ ದರ್ಶನ್ ಆಪ್ತ ಧನ್ವೀರ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನಿನ್ನೆ ಧನ್ವೀರ್ ಅವರನ್ನು ಕರೆಸಿಕೊಂಡ ಸಿಸಿಬಿ ಪೊಲೀಸರು ಅವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ದರ್ಶನ್ ಆಪ್ತ ಧನ್ವೀರ್ ಪರಪ್ಪನ ಅಗ್ರಹಾರದ ಕೈದಿಗಳ ವಿಡಿಯೋ ರಿಲೀಸ್ ಮಾಡಿದ್ರಾ ಎಂಬ ಅನುಮಾನದ ಹಿನ್ನೆಲೆ ಅವರನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಪರಿಶೀಲನೆ ವೇಳೆ ಮೊಬೈಲ್ ನಲ್ಲಿ ಯಾವುದೇ ಸಾಕ್ಷಿ ಸಿಗಲಿಲ್ಲ. ಈ ಹಿನ್ನೆಲೆ ಅವರನ್ನು ಬಿಟ್ಟು ಕಳುಹಿಸಿರುವ ಸಿಸಿಬಿ ಪೊಲೀಸರು ಮತ್ತೆ ವಿಚಾರಣೆ ಅಗತ್ಯ ಇದ್ದರೆ ಮತ್ತೆ ಬರಬೇಕು ಎಂದು ಹೇಳಿದ್ದಾರೆ.
