‘ಮಹಾನಟಿ’ ವಿನ್ನರ್ ವಂಶಿಗೆ ಚಿನ್ನದ ಕಿರೀಟ, ವರ್ಷಾ ಮೊದಲ ರನ್ನರ್ ಅಪ್

ಜೀ ಕನ್ನಡದಲ್ಲಿ ಪ್ರಸಾರವಾದ ‘ಮಹಾನಟಿ’ ಸೀಸನ್ 2ರ ವಿನ್ನರ್ ಆಗಿ ಮಂಗಳೂರಿನ ವಂಶಿ ಆಯ್ಕೆಯಾಗಿದ್ದಾರೆ. ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿದ ಅವರು ಮಹಾನಟಿ ವಿನ್ನರ್ ಆಗಿದ್ದಾರೆ. ಬೆಳಗಾವಿಯ ವರ್ಷ ಡಿಗ್ರಜೆ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ.

ನಟ ರಮೇಶ್ ಅರವಿಂದ್, ನಟಿಯರಾದ ಪ್ರೇಮಾ, ನಿಶ್ವಿಕಾ ನಾಯ್ಡು, ನಿರ್ದೇಶಕ ತರುಣ್ ಸುಧೀರ್ ಅವರು ಮಹಾನಟಿ ಶೋನ ಜಡ್ಜ್ ಸ್ಥಾನದಲ್ಲಿದ್ದರು. ಭಾನುವಾರ ಗ್ರ್ಯಾಂಡ್ ಫಿನಾಲೆಯಲ್ಲಿ ವರ್ಷಾ ಡಿಗ್ರಜೆ ಮೊದಲ ರನ್ನರ್ ಅಪ್ ಆಗಿದ್ದು, ವಂಶಿ ವಿನ್ನರ್ ಆಗಿದ್ದಾರೆ.

ಬಿ. ಸರೋಜಾ ದೇವಿ ಅವರ ಹೆಸರಿನ ಟ್ರೋಫಿ ಮೂಲಕ ಅವರ ಆಶೀರ್ವಾದ ನನಗೆ ಸಿಕ್ಕಿದೆ. ನಟಿ ಆಗಬೇಕು ಎಂಬ ಕನಸು ಕಂಡ ನನಗೆ ಇದು ಮೊದಲ ಹೆಜ್ಜೆಯಾಗಿದೆ ಎಂದು ವಂಶಿ ಹೇಳಿದ್ದಾರೆ.

ಮಹಾನಟಿ ಸೀಸನ್-2ರ ವಿಜಯಶಾಲಿ ಮಂಗಳೂರಿನ ವಂಶಿ ರತ್ನಾಕರ್ ಅವರಿಗೆ ವೈಟ್‌ಗೋಲ್ಡ್ ವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ನೀಡಲಾಗಿದೆ.

ಮಹಾನಟಿ ಸೀಸನ್-2ರ ಮೊದಲ Runner Up ಆದ ಬೆಳಗಾವಿಯ ವರ್ಷಾ ಡಿಗ್ರಜೆ ಅವರಿಗೆ ಜಾರ್ ಆ್ಯಪ್ ವತಿಯಿಂದ 10 ಲಕ್ಷ ರೂ.ಗಳ ನಗದು ಬಹುಮಾನ ನೀಡಲಾಗಿದೆ. ಎರಡನೇ Runner Up ಆದ ಮೈಸೂರಿನ ಶ್ರೀಯ ಅಗಮ್ಯ ಅವರಿಗೆ ಅಶ್ವಸೂರ್ಯ ರಿಯಾಲಿಟಿ ಪ್ರೈವೇಟ್ ಲಿಮಿಟೆಡ್ ವತಿಯಿಂದ 7 ಲಕ್ಷ ನಗದು ಬಹುಮಾನ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read