ವಿಶಾಖಪಟ್ಟಣಂ : ಕಳ್ಳ-ಪೊಲೀಸ್ ಆಟದ ನೆಪದಲ್ಲಿ ಸೊಸೆ ಅತ್ತೆಗೆ ಬೆಂಕಿ ಹಚ್ಚಿ ಕೊಂದ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಆಂಧ್ರಪ್ರದೇಶದ ವೇಪಗುಂಟಾ ಸಮೀಪದ ಅಪ್ಪಣ್ಣಪಾಲೆಂ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಜಯಂತಿ ಕನಕ ಮಹಾಲಕ್ಷ್ಮಿ (63) ಎಂದು ಗುರುತಿಸಲಾಗಿದೆ. ಸೊಸೆ ಲಲಿತಾ ಈ ಕೃತ್ಯ ಎಸಗಿದ್ದಾಳೆ.
ಅತ್ತೆಗೆ ಹಾಗೂ ಸೊಸೆಗೆ ಆಗಿ ಬರುತ್ತಿರಲಿಲ್ಲ,ಆದ್ದರಿಂದ ಹೇಗಾದರೂ ಮಾಡಿ ಅತ್ತೆಯನ್ನ ಮುಗಿಸಬೇಕೆಂದು ಸೊಸೆ ಸ್ಕೆಚ್ ಹಾಕಿದ್ದಳು. ಇದಲ್ಲದೇ ಈಕೆ ಆನ್ ಲೈನ್ ನಲ್ಲಿ ಹಲವು ವಿಡಿಯೋ ನೋಡಿ ಸ್ಕೆಚ್ ಹಾಕಿದ್ದಳು.ತನ್ನ ಪುಟ್ಟ ಮಕ್ಕಳ ಸಹಾಯ ಪಡೆದು ಈ ಕೊಲೆ ಮಾಡಿದ್ದಾಳೆ.
ತನ್ನ ಮಕ್ಕಳಿಗೆ ನಿಮ್ಮ ಅಜ್ಜಿಯ ಜೊತೆ ಕಳ್ಳ-ಪೊಲೀಸ್ ಆಟವಾಡಿ ಎಂದಿದ್ದಾಳೆ. ಅಜ್ಜಿಯ ಕಣ್ಣಿಗೆ ಬಟ್ಟೆ ಕಟ್ಟುವಂತೆ ಸೂಚಿಸಿದ್ದಾಳೆ. ಬಟ್ಟೆ ಕಟ್ಟಿದ ನಂತರ ಹಿಂದಿನಿಂದ ಜಯಂತಿ ಮೇಲೆ ಪೆಟ್ರೋಲ್ ಸುರಿದಿದ್ದಾಳೆ. ಉರಿಯಿಂದ ಜಯಂತಿ ಜೋರಾಗಿ ಕಿರುಚಿಕೊಂಡಿದ್ದು, ವಿಚಾರ ತಿಳಿದ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಬಂದು ಜಯಂತಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ಜಯಂತಿ ಮೃತಪಟ್ಟಿದ್ದಾಳೆ. ಮೊದಲಿಗೆ ಆಕಸ್ಮಾತ್ ಆಗಿ ಬೆಂಕಿ ತಗುಲಿದೆ ಎಂದು ವಾದಿಸಿದ ಸೊಸೆ ಬಳಿಕ ತಾನೇ ಬೆಂಕಿ ಹಚ್ಚಿದಿರುವುದಾಗಿ ಒಪ್ಪಿಕೊಂಡಿದ್ದಾಳೆ.
