ವಾಷಿಂಗ್ಟನ್: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆ ಸಂಪರ್ಕದಲ್ಲಿದ್ದ ಮೋಸ್ಟ್ ವಾಂಟೆಡ್ ಇಬ್ಬರು ದರೋಡೆಕೋರರನ್ನು ಅಮೆರಿಕಾ ಹಾಗೂ ಜಾರ್ಜಿಯಾದಲ್ಲಿ ಭಾರತೀಯ ಭದ್ರತಾ ಪಡೆಗಳು ಬಂಧಿಸಿವೆ.
ವೆಂಕಟೇಶ್ ಗಾರ್ಗ್ ಹಾಗೂ ಭಾನು ರಾಣಾ ಬಂಧಿತ ಆರೋಪಿಗಳು. ಹರಿಯಾಣ ಪೊಲೀಸರು ಹಾಗೂ ಭದ್ರತಾ ಸಂಸ್ಥೆಯ ಅಧಿಕಾರಿಗಳು ವೆಂಕಟೇಶ್ ಗಾರ್ಗ್ ನನ್ನು ಜಾರ್ಜಿಯಾದಲ್ಲಿ ಬಂಧಿಸಿದ್ದಾರೆ. ಭಾನು ರಾಣಾನನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ.
ಈ ಇಬ್ಬರು ಕುಖ್ಯಾತರು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆ ಸಂಪರ್ಕದಲ್ಲಿದ್ದರು. ಇಬ್ಬರೂ ಶೀಘ್ರದಲ್ಲಿಯೇ ಭಾರತಕ್ಕೆ ಗಡಿಪಾರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
