ಬೆಂಗಳೂರು: ಚಿನ್ನಾಭರಣಕ್ಕಾಗಿ ವೃದ್ಧೆ ಕೊಲೆಗೈದಿದ್ದ ಆರೋಪಿ ಮಹಿಳೆಯನ್ನು ಸರ್ಜಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೀಪಾ(38) ಬಂಧಿತ ಆರೋಪಿ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಕೂಗೂರು ಗ್ರಾಮದ ನಿವಾಸಿಯಾಗಿರುವ ದೀಪಾ ಅಕ್ಟೋಬರ್ 30ರಂದು ಭದ್ರಮ್ಮ(68) ಅವರನ್ನು ಕೊಲೆ ಮಾಡಿದ್ದಳು.
ಕಜ್ಜಾಯ ಕೊಡುವುದಾಗಿ ಭದ್ರಮ್ಮ ಅವರನ್ನು ಮನೆಗೆ ಕರೆದು ದೀಪಾ ಕೊಲೆ ಮಾಡಿದ್ದಳು. ಶವವನ್ನು ಎರಡು ದಿನ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದ ಆರೋಪಿ ದುರ್ವಾಸನೆ ಬರುತ್ತಿದ್ದಂತೆ ಕಾರ್ ನಲ್ಲಿ ಶವ ತೆಗೆದುಕೊಂಡು ಹೋಗಿ ಕೆರೆಗೆ ಎಸೆದಿದ್ದಳು. ದೊಡ್ಡ ತಿಮ್ಮಸಂದ್ರ ಕೆರೆಯಲ್ಲಿ ಶವ ಪತ್ತೆಯಾದ ನಂತರ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸರ ವಿಚಾರಣೆಯ ವೇಳೆ ಕೊಲೆಗೈದ ಬಗ್ಗೆ ದೀಪಾ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿ ದೀಪಾಳನ್ನು ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
