ಚಾಮರಾಜನಗರ: ಚಿರತೆ ಕೂಂಬಿಂಗ್ ಕಾರ್ಯಾಚರಣೆ ವೇಳೆ ಫಾರೆಸ್ಟ್ ವಾಚರ್ ಮೇಲೆಯೇ ಚಿರತೆ ದಾಳಿ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಫಾರೆಸ್ಟ್ ವಾಚರ್ ಬಂಗಾರು ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದೆ. ಬಂಗಾರು ಅವರ ಕತ್ತು, ತಲೆ, ಕೈಗಳಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರು ಬಂಡೀಪುರ ಹುಲಿ ರಕ್ಷಿತಾರಣ್ಯದ ಓಂಕಾರ್ ವಲಯದ ವಾಚರ್ ಆಗಿದ್ದಾರೆ.
ಗ್ರಾಮದಲ್ಲಿ ಮೇಕೆಯನ್ನು ಚಿರತೆ ಬಲಿಪಡೆದ ಹಿನ್ನೆಲೆಯಲ್ಲಿ ಫಾರೆಸ್ಟ್ ವಾಚರ್ ಬಂಗಾರು ಅವರು ಸ್ಥಳಕ್ಕೆ ತೆರಳಿ ಕೂಂಬಿಂಗ್ ನಡೆಸುತ್ತಿದ್ದ ವೇಳೆ ಹಾಡಹಗಲೇ ಚಿರತೆ ದಾಳಿ ನಡೆಸಿದೆ. ಘಟನೆ ಕಂಡು ಅರಣ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
