ವಿದ್ಯಾರ್ಥಿಗಳೇ ಗಮನಿಸಿ : ಅರಿವು (ನವೀಕರಣ) ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿಗೆ ಅರಿವು (ನವೀಕರಣ) ಶೈಕ್ಷಣಿಕ ಸಾಲ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮತೀಯ ಅಲ್ಪಸಂಖ್ಯಾತ ಮುಸ್ಲಿಂ, ಜೈನ್, ಸಿಖ್ಖ್, ಪಾರ್ಸಿ ಸಮುದಾಯದಲ್ಲಿ ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ, ನೀಟ್, ಡಿ-ಸಿಇಟಿ, ಪಿಜಿ-ಸಿಇಟಿ ನಲ್ಲಿ ಆಯ್ಕೆಯಾದ ಪದವಿ, ಸ್ನಾತಕೋತ್ತರ ಕೋರ್ಸ್ಗಳಾದ ವೈದ್ಯಕೀಯ (ಎಂಬಿಬಿಎಸ್, ಎಂಡಿ, ಎಂಎಸ್) ಹಾಗೂ ದಂತ ವೈದ್ಯಕೀಯ (ಬಿಡಿಎಸ್, ಎಂಡಿಎಸ್) ಹಾಗೂ ಬಿಇ, ಬಿಟೆಕ್, ಬ್ಯಾಚುಲರ್ ಆಫ್ ಆರ್ಕಿಟೇಕ್ಚರ್, ಎಂ.ಆರ್ಕಿಟೇಕ್ಚರ್ ಮತ್ತು ಆಯುಷ್ (ಬಿ.ಆಯುಷ್, ಎಂ.ಆಯುಷ್), ತೋಟಗಾರಿಕೆ, ಕೃಷಿ ಎಂಜಿನಿಯರಿAಗ್, ಡೈರಿ ತಂತ್ರಜ್ಞಾನ, ಅರಣ್ಯ, ಪಶುವೈದ್ಯಕೀಯ ಮತ್ತು ಪ್ರಾಣಿ ತಂತ್ರಜ್ಞಾನ, ಮೀನುಗಾರಿಕೆ, ರೇಷ್ಮೆ ಕೃಷಿ, ಗೃಹ/ಸಮುದಾಯ ವಿಜ್ಞಾನ, ಎಂಬಿಎ, ಎಂಸಿಎ, ಎಲ್‌ಎಲ್‌ಬಿ, ಬಿಎಸ್‌ಸಿ, ಆಹಾರ ಪೋಷಣೆ ಮತ್ತು ಆಹಾರ ಪದ್ಧತಿ, ಬಿ.ಫಾರ್ಮಾ, ಎಂ.ಫಾರ್ಮಾ, ಫಾರ್ಮಾ ಡಿ ಮತ್ತು ಡಿ.ಫಾರ್ಮಾ.ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು (ನವೀಕರಣ) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

ಅರಿವು (ರಿನ್ಯೂವಲ್) ಸಾಲ ಯೋಜನೆಯಡಿ ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸುವಾಗ ನಿಗಮದಿಂದ ಈ ಹಿಂದಿನ ವರ್ಷದಲ್ಲಿ ಪಡೆದಿರುವ ಒಟ್ಟು ಸಾಲದ ಬಾಕಿಯ ಮೊತ್ತದ ಶೇ.12 ರಷ್ಟು ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು ಅಥವಾ ಜಿಲ್ಲಾ ಕಚೇರಿಯಲ್ಲಿ ಪಾವತಿಸಬೇಕು.

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು, ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ರಿನ್ಯೂವಲ್ ಮೊತ್ತವನ್ನು ಪಾವತಿಸುವುದು ಆಗತ್ಯವಿರುವುದಿಲ್ಲ. ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಅರ್ಜಿ ಸಲ್ಲಿಸಲು ಆನ್‌ಲೈನ್ ವೆಬ್‌ಸೈಟ್ https://kmdconline.karnataka.gov.in/ ಗೆ ಭೇಟಿ ನೀಡಿ ಸಲ್ಲಿಸಬಹುದು. ಡಿಸೆಂಬರ್ 03 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಮೌಲಾನ ಆಜಾದ್ ಭವನದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-294370 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read