ನವದೆಹಲಿ: ರಸ್ತೆ ಮಧ್ಯೆಯೇ ಬೆಂಜ್ ಕಾರೊಂದು ಬೆಂಕಿಯಲ್ಲಿ ಹೊತ್ತಿ ಉರಿದಿದ್ದು, ಕಾರಿನಲ್ಲಿ ಸಿಲುಕಿದ್ದ ಮಹಿಳೆ ಹಾಗೂ ಮಗುವನ್ನು ರಕ್ಷಿಸಿರುವ ಘಟನೆ ದೆಹಲಿಯ ಗೋವಿಂದಪುರದಲ್ಲಿ ನಡೆದಿದೆ.
ಗೋವಿಂದಪುರದ ತಾರಾ ಅಪಾರ್ಟ್ ಮೆಂಟ್ ಬಳಿ ಸಿಗ್ನಲ್ ನಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡಿದ್ದ ಕಾರಿನಲ್ಲಿ ಓರ್ವ ಮಹಿಳೆ ಹಾಗೂ 5 ವರ್ಷದ ಮಗು ಸಿಲುಕಿಕೊಂಡಿದ್ದರು. ತಕ್ಷಣ ಪೊಲೀಸರು ಹಾಗೂ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದು, ಕಾರಿನೊಳಗಿದ್ದ ಮಹಿಳೆ ಹಾಗೂ ಮಗುವನ್ನು ರಕ್ಷಿಸಿದ್ದಾರೆ.
ಜಲಮಂಡಳಿ ನೀರಿನ ಟ್ಯಾಂಕ್ ಸಹಾಯದಿಂದ ಬೆಂಕಿ ನಂದಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
