ಧಾರವಾಡ : 2025-26 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಐಎಎಸ್, ಕೆಎಎಸ್ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುತ್ತದೆ.
ಗ್ರೂಪ್-ಸಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲು ಇಲಾಖೆಯಿಂದ ಆಯೋಜಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನವೆಂಬರ್ 08, 2025 ರಂದು ಬೆಳಿಗ್ಗೆ 10:30 ಗಂಟೆಯಿಂದ 12:30 ರ ವರೆಗೆ ಹುಬ್ಬಳ್ಳಿ ನವನಗರದ ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗುತ್ತದೆ.
ಯು.ಪಿ.ಎಸ್.ಸಿ ನಾಗರೀಕ ಸೇವೆ ಐಎಎಸ್, ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ, ಇಲಾಖೆಯಿಂದ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲು ಆಯೋಜಿಸುವ ಸಾಮಾನ್ಯ ಪ್ರವೇಶ ಪರಿಕ್ಷೇಯನ್ನು ನವೆಂಬರ್ 09, 2025 ಬೆಳಿಗ್ಗೆ 10:30 ರಿಂದ 12:30 ರ ವರೆಗೆ ಮತ್ತು ಮಧ್ಯಾಹ್ನ 2 ರಿಂದ 2:45 ರ ವರೆಗೆ ಜರುಗಿಸಲಾಗುತ್ತದೆ.
ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ಡೌನಲೋಡ್ ಮಾಡಿಕೊಳ್ಳಲು ವೆಬ್‍ಸೈಟ್ https://sevasindhu.Karnataka.gov.in/Mino…/Hall_Ticket.aspx ಬಳಸಬಹುದು. ಮತ್ತು ನವೆಂಬರ್ 05, 2025 ರಿಂದ ನವೆಂಬರ್ 07,2025 ರ ವರೆಗೆ ಮಾತ್ರ ಪ್ರವೇಶ ಪತ್ರವನ್ನು ಡೌನಲೋಡ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
