ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 52.87 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಅ.29 ರಿಂದ ನ.5 ರವರೆಗೆ ಪ್ರತ್ಯೇಕವಾಗಿ ಈ ಕಾರ್ಯಾಚರಣೆ ನಡೆದಿದೆ. ಬ್ಯಾಂಕಾಗ್ ನಿಂದ ಬಂದಿಳಿದ ನಾಲ್ವರು ಪ್ರಯಾಣಿಕರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 52.87 ಕೋಟಿ ರೂ ಮೌಲ್ಯದ 52 ಕೆಜಿ ಹೈಡ್ರೋಗಾಂಜಾ ಜಪ್ತಿ ಮಾಡಲಾಗಿದೆ.
ವಿದೇಶದಿಂದ ಬರುವಾಗ ಬ್ಯಾಗ್ ನಲ್ಲಿ ಹೈಡ್ರೋ ಗಾಂಜಾ ಅಡಗಿಸಿ ತಂದಿದ್ದರು. ಪರಿಶೀಲನೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಥೈಲ್ಯಾಂಡ್ ಸೇರಿ ಕೆಲವು ದೇಶಗಳಲ್ಲಿ ಹೈಡ್ರೋ ಗಾಂಜಾವನ್ನು ತಯಾರಿಸಲಾಗುತ್ತದೆ. ಇದರ ಬೆಲೆ ಕೆಜಿಗೆ 1 ಕೋಟಿ ರೂ ಇದೆ.
