ಕೊಪ್ಪಳ: ನಾಗರಿಕ ಸಮಾಜ ತಲೆತಗ್ಗಿಸುವಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಸ್ವಂತ ಅಣ್ಣನೇ ತಂಗಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭವತಿಯನ್ನಾಗಿ ಮಾಡಿದ್ದು, ಸಂತ್ರಸ್ತೆ ಮಗುವಿಗೆ ಜನ್ಮ ನೀಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಅಣ್ಣನಿಂದಲೇ ಗರ್ಭಿಣಿಯಾಗಿದ್ದ ಅಪ್ರಾಪ್ತೆ ವಾರದ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ. 21 ವರ್ಷದ ಅಣ್ಣನ ವಿರುದ್ಧ ಸಂಸ್ತೆ ದೂರು ನೀಡಿದ್ದು, ಪೊಕ್ಸೋ ಕೇಸ್ ದಾಖಲಾಗಿದೆ.
ಸದ್ಯ ಪೊಲೀಸರು ಆರೋಪಿ ಅಣ್ಣನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಆರೋಪಿ ತನ್ನ ತಂಗಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರವೆಸಗುತ್ತಿದ್ದ. ವಿಷಯ ಬಾಯ್ಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದ. ಬಾಲಕಿ ಗರ್ಭಿಣಿಯಾಗಿದ್ದರೂ ಪೋಷಕರಿಗೆ ಗೊತ್ತಿರಲಿಲ್ಲ. ಕೆಲ ದಿನಗಳ ಹಿಂದೆ ಬಾಲಕಿ ಮನೆಯಲ್ಲಿ ಜಾರಿ ಬಿದ್ದಿದ್ದ ವೇಳೆ ಸೊಂಟಕ್ಕೆ ಪೆಟ್ಟಾಗಿತ್ತು. ವೈದ್ಯರು ಸ್ಕ್ಯಾನಿಂಗ್ ಗೆ ಸೂಚಿಸಿದ್ದರು. ಈ ವೇಳೆ ಬಾಲಕಿ ಗರ್ಭವತಿ ಎಂಬುದು ಗೊತ್ತಾಗಿದೆ. ಆಸ್ಪತ್ತೆಯಲ್ಲಿಯೇ ಬಾಲಕಿ ಹೆರಿಗೆಯಾಗಿದ್ದಾಳೆ. ತಾನು ಗರ್ಭವತಿಯಾಗಿದ್ದೆ ಎಂಬುದೇ ತನಗೆ ಗೊತ್ತಾಗಿಲ್ಲ ಎಂದು ಬಾಲಕಿ ತಿಳಿಸಿದ್ದಾಳೆ. ಅಪ್ರಾಪ್ತ ತಂಗಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮಗು ನೀಡಿದ ಅಣ್ಣ ಜೈಲುಪಾಲಾಗಿದ್ದಾನೆ.
