ಶಿವಮೊಗ್ಗ: ಹಾಸ್ಟೆಲ್ ನಲ್ಲಿಯೇ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
21 ವರ್ಷದ ಮನಿಷಾ ಮೃತ ವಿದ್ಯಾರ್ಥಿನಿ. ಭದ್ರಾವತಿ ತಾಲೂಕಿನ ದೊಡ್ದೇರಿ ಗ್ರಾಮದ ಗಂಗೂರು ಗ್ರಾಮದ ನಿವಾಸಿ. ಹಾಸ್ಟೆಲ್ ನಲ್ಲಿದ್ದುಕೊಂಡು ಶಿವಮೊಗ್ಗದ ಡಿವಿಎಸ್ ಸೈನ್ಸ್ ಕಾಲೇಜಿನಲ್ಲಿ ಓದುತ್ತಿದ್ದಳು.
ಇದೀಗ ಇದ್ದಕ್ಕಿದ್ದಂತೆ ಹಾಸ್ಟೆಲ್ ರೂಂ ನಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
