ಬೆಂಗಳೂರು: ಇಪಿಎಫ್ ಒ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿರುವ ಪೊಲೀಸರು ಆರೋಪಿಗಳಾದ ಗೋಪಿನಾಥ್, ಜಗದೀಶ್, ಲಕ್ಷ್ಮೀ, ಲಿಂಗೇಗೌಡ, ರಾಮಾನುಜ ಅವರ ಆರ್.ಆರ್.ನಗರ, ಜೆ.ಪಿ.ನಗರ, ಅಂಜನಾಪುರದಲ್ಲಿರುವ ಮನೆಗಳ ಮೇಲೆ ಹಾಗೂ ರಿಚ್ಮಂಡ್ ಸರ್ಕಲ್ ನಲ್ಲಿರುವ ಸೊಸೈಟಿ ಕಚೇರಿಗಳ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಚಿನ್ನಾಭರಣ, ನಗದು, ಹೂಡಿಕೆ ಪತ್ರಗಳು ಪತ್ತೆಯಾಗಿವೆ.
