ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ನಾಳೆ ಯೂಟ್ಯೂಬ್ ಲೈವ್ ಕಾರ್ಯಗಾರದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಕೆ.ಪಿ.ಎಸ್. ಶಾಲೆಗಳಲ್ಲಿನ ಪ್ರಾಂಶುಪಾಲರು, ಹಾಗೂ SDMC & CDC ಅಧ್ಯಕ್ಷರು ಇವರಿಗೆ ತರಬೇತಿ ಕಾರ್ಯಾಗಾರ 11.00 ಗಂಟೆಯ ಬದಲಾಗಿ ಅದೇ ದಿನದಂದು 02.30ಕ್ಕೆ ನಿಗಧಿಯಾಗಿರುತ್ತದೆ. ಸದರಿ ತರಬೇತಿ ಕಾರ್ಯಾಗಾರವನ್ನು ಯುಟ್ಯೂಬ್ ಲೈವ್ ನಲ್ಲಿ ಈ ಕೆಳಕಂಡ ಲಿಂಕ್ ಮೂಲಕ ಭಾಗವಹಿಸಲು ತಿಳಿಸಿದೆ.
SDMC ಅಧ್ಯಕ್ಷರು ಕಡ್ಡಾಯವಾಗಿ ಶಾಲಾ ಆವರಣದಲ್ಲಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಶಾಲಾ ಮುಖ್ಯಸ್ಥರು ಕ್ರಮವಹಿಸುವುದು ಹಾಗೂ ತರಬೇತಿಗೆ ಸಂಬಂಧಿಸಿದ ಪ್ರಶ್ನೆಗಳಿದಲ್ಲಿ ದೂರವಾಣಿ ಸಂ. 9480695471 ಗೆ ಪೂರ್ವಭಾವಿಯಾಗಿ ದಿನಾಂಕ: 05.11.2025ರ ಸಂಜೆ: 04.30ರೊಳಗೆ ವಾಟ್ಸಪ್ ಸಂದೇಶದ ಮೂಲಕ ಕಳುಹಿಸಲು ತಿಳಿಸಿದೆ.

