ಮೈಸೂರು: ನಿರ್ಮಾಪಕರು, ನಿರ್ದೇಶಕರು ಇದ್ದರೆ ಸ್ಟಾರ್ ಗಳು ಬರುತ್ತಾರೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಾರ್ ಗಳಿಲ್ಲದೆ ಮಾಡಿರುವ ಸಿನಿಮಾಗೆ ಪ್ರಶಸ್ತಿ ಬಂದಿರುವುದು ಖುಷಿ ಇದೆ. ಮೈಸೂರು ಸಿಹಿಕಹಿ ಘಟನೆಗಳಿಗೆ ಸಾಕ್ಷಿಯಾಗಿತ್ತು. ಅವಮಾನವಾದ ಜಾಗದಲ್ಲೇ ಸನ್ಮಾನ ಮಾಡಿರುವುದು ಖುಷಿ ತಂದಿದೆ. ಕೊಲೆ ಆರೋಪಿ ದರ್ಶನ್ ತಾಯಿ ಚಾಮುಂಡೇಶ್ವರಿ ನಂಬಿದ್ದಾರೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣ ನ್ಯಾಯಾಲಯದಲ್ಲಿದೆ. ದರ್ಶನ್ ಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ನಿರ್ಮಾಪಕರು, ನಿರ್ದೇಶಕರು ಸೇರಿದಾಗ ಮಾತ್ರ ಸ್ಟಾರ್ ಹುಟ್ಟು ಹಾಕಬಹುದು. ಸ್ಟಾರ್ ಮಾಡುವುದು ಜನರು, ಒಂದು ಸಿನಿಮಾಗೆ ದೊಡ್ಡ ಸ್ಟಾರ್ ಎಂದರೆ ನಿರ್ಮಾಪಕರು ಮತ್ತು ನಿರ್ದೇಶಕರು ಎಂದು ಹೇಳಿದ್ದಾರೆ.
