ದಾವಣಗೆರೆ: ಹೊಸ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿದರೆ ತಿಂಗಳಿಗೆ ಶೇಕಡ 300 ರಷ್ಟು ಲಾಭಗಳಿಸಬಹುದು ಎಂದು ನಂಬಿಸಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶಿಕ್ಷಕರೊಬ್ಬರಿಗೆ ಆನ್ಲೈನ್ ಮೂಲಕ 11.93 ಲಕ್ಷ ರೂಪಾಯಿ ವಂಚನೆ ಎಸಗಿದ್ದ ಘಟನೆ ಬೆಳಕಿಗೆ ಬಂದಿದೆ.
ವಾಟ್ಸಪ್ ಗ್ರೂಪ್ ಗೆ ಶಿಕ್ಷಕರ ಮೊಬೈಲ್ ಸಂಖ್ಯೆಯನ್ನು ಸೇರಿಸಿದ್ದ ವಂಚಕರು ಷೇರು ಹೂಡಿಕೆಗೆ ಉತ್ತೇಜಿಸಿದ್ದರು. ವಂಚಕರು ಹೇಳಿದಂತೆ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಲಾಭದ ಆಸೆಗಾಗಿ ಶಿಕ್ಷಕ ಹಂತ ಹಂತವಾಗಿ 11.93 ಲಕ್ಷ ರೂ. ಮೊತ್ತವನ್ನು ಮತ್ತು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಕೊನೆಗೆ ಹಣ ಬಿಡಿಸಿಕೊಳ್ಳಲು ಸಾಧ್ಯವಾಗದಿರುವುದನ್ನು ಪ್ರಶ್ನಿಸಲು ಮುಂದಾದಾಗ ವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಂಚನೆಗೊಳಗಾದ ಶಿಕ್ಷಕ ದಾವಣಗೆರೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
