ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಘೋರ ಘಹ್ಟನೆ ನಡೆದಿದೆ. ಕೆರೆಯ ಬಳಿ ಆಟವಾಡುತ್ತಿದ್ದ ಇಬ್ಬರು ಬಾಲಕರು, ಕೆರೆ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ವಿಶ್ವೇಷ್ವರಯ್ಯ ಲೇಔಟ್ ನಲ್ಲಿ ಈ ದುರಂತ ಸಂಭವಿಸಿದೆ. 10 ವರ್ಷದ ಜಗನ್ನಾಥ್ ಹಾಗೂ 8 ವರ್ಷದ ಸಂಜಯ್ ಮೃತ ಬಾಲಕರು. ಇಬ್ಬರೂ ಅಣ್ಣ-ತಮ್ಮಂದಿರು. ಮನೆಯ ಬಳಿಯೇ ಇದ್ದ ಕೆರೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕೆರೆ ನೀರಿಗೆ ಬಿದ್ದಿದ್ದಾರೆ. ತಕ್ಷಣ ಪೋಷಕರು ಮಕ್ಕಳನ್ನು ಮೇಲಕೆತ್ತಿದ್ದಾರೆ. ಅಷ್ಟರಲ್ಲಿ ಬಾಲಕ ಜಗನ್ನಾಥ್ ಮೃತಪಟ್ಟಿದ್ದ. ಇನ್ನೋರ್ವ ಬಲಕ ಸಂಜಯ್ ಸ್ಥಿತಿ ಗಂಭೀರವಾಗಿತ್ತು.
ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಜಯ್ ಕೂಡ ಕೊನೆಯುಸಿರೆಳೆದಿದ್ದಾನೆ. ಇಬ್ಬರೂ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 
			 
		 
		 
		 
		 Loading ...
 Loading ... 
		 
		 
		