ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಿಕೃತ ಕಾಮಿಯೋರ್ವ ನಡುರಸ್ತೆಯಲ್ಲೇ ನಗ್ನವಾಗಿ ಓಡಾಡಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಘಟನೆ ವರದಿಯಾಗಿದೆ.
ನಡುರಸ್ತೆಯಲ್ಲೇ ಬೆತ್ತಲಾಗಿ ಓಡಾಡುವ ಯುವಕ ಮಹಿಳೆಯನ್ನು ನೋಡಿದಾಕ್ಷಣ ಅಸಭ್ಯವಾಗಿ ವರ್ತಿಸುತ್ತಾನೆ. ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾಮುಕನ ಕಾಟಕ್ಕೆ ಮಹಿಳೆಯರು ರೋಸಿ ಹೋಗಿದ್ದಾರೆ.
ಯುವಕನ ವರ್ತನೆಯಿಂದ ಭಯಗೊಂಡ ಮಹಿಳೆಯರು, ಯುವತಿಯರು ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 
			 
		 
		 
		 
		 Loading ...
 Loading ... 
		 
		 
		