ಫರಿದಾಬಾದ್ : ದೇಶದಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು, ಚಲಿಸುತ್ತಿದ್ದ ಕಾರಿನಲ್ಲಿ 15 ವರ್ಷದ ಬಾಲಕಿಯನ್ನು ನಾಲ್ವರು ಅಪರಿಚಿತ ಯುವಕರು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
8 ನೇ ತರಗತಿಯ ವಿದ್ಯಾರ್ಥಿನಿಯನ್ನು ಅಕ್ಟೋಬರ್ 27 ರ ಮುಂಜಾನೆ ಆಕೆಯ ಮನೆಯ ಬಳಿ ಬಿಟ್ಟು ಹೋಗುವ ಮೊದಲು ಸುಮಾರು ಒಂಬತ್ತು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಲಾಗಿತ್ತು.ಪೊಲೀಸರ ಪ್ರಕಾರ, ಬಾಲಕಿಯ ಅಕ್ಕ ದೂರು ದಾಖಲಿಸಿದ್ದು, ತನ್ನ ತಂಗಿ ಅಕ್ಟೋಬರ್ 26 ರಂದು ಸಂಜೆ 7 ಗಂಟೆ ಸುಮಾರಿಗೆ ಸೆಕ್ಟರ್ 18 ಮಾರುಕಟ್ಟೆಗೆ ಹೋಗಿದ್ದರು ಆದರೆ ಮನೆಗೆ ಹಿಂತಿರುಗಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ.
ಅಕ್ಟೋಬರ್ 27 ರಂದು ಬೆಳಗಿನ ಜಾವ 4.30 ರ ಸುಮಾರಿಗೆ, ಬಾಲಕಿ ಮನೆಗೆ ಹಿಂತಿರುಗಿದ್ದು, ನಡೆದ ಘಟನೆ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ.ಕಾರಿನಲ್ಲಿ ನಾಲ್ವರು ಪುರುಷರು ತನ್ನನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಬಹಿರಂಗಪಡಿಸಿದಳು. ಪುರುಷರು ಆಕೆಗೆ ಮಾದಕ ದ್ರವ್ಯ ನೀಡಿ, ಸ್ಥಳದಿಂದ ಪರಾರಿಯಾಗುವ ಮೊದಲು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ .
ದೂರಿನ ನಂತರ, ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಫರಿದಾಬಾದ್ ಹಳೆಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಾಲಕಿ ಇನ್ನೂ ಹೇಳಿಕೆ ನೀಡಲು ಸದೃಢಳಾಗಿಲ್ಲ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ವಿಷ್ಣು ಮಿತ್ತರ್ ಹೇಳಿದ್ದಾರೆ. ನಾವು ಸೆಕ್ಟರ್ 18 ಮಾರುಕಟ್ಟೆ ಮತ್ತು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳನ್ನು ಗುರುತಿಸಲು ತಂಡವನ್ನು ರಚಿಸಲಾಗಿದೆ ಮತ್ತು ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದರು.
