ರಾಮನಗರ: ರಾಮನಗರದ ಮೋತಿ ನಗರದಲ್ಲಿ ಪೀರಾನ್ ಶಾ ವಲಿ ದರ್ಗಾದ ಮೆರವಣಿಗೆಯ ವೇಳೆ ಡಿಜೆ ಬಳಕೆ ಮಾಡಲಾಗಿದೆ.
ಅಕ್ಟೋಬರ್ 28 ರಂದು ರಾತ್ರಿ ಡಿಜೆ ಬಳಸಿ ಮೆರವಣಿಗೆ ಮಾಡಿದ್ದರು. ದರ್ಗಾ ಸಮಿತಿಯ ವಿರುದ್ಧ ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆಡಳಿತ ಮಂಡಳಿ ಸೇರಿ ದುರ್ಗಾ ಸಮಿತಿಯ ಮೂವರ ವಿರುದ್ಧ ರಾಮನಗರದ ಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರಾಮನಗರದ ಪೀರಾನ್ ಶಾ ವಲಿ ದರ್ಗಾದ ಮೆರವಣಿಗೆಯಲ್ಲಿ ಅನುಮತಿ ಇಲ್ಲದೇ ಡಿಜೆ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
