ಬೆಂಗಳೂರು : ಹಣ ಕೊಡದಿದ್ರೆ ರೇಣುಕಾಸ್ವಾಮಿ ರೀತಿ ಕೊಲೆ ಆಗ್ತೀಯಾ ಎಂದು ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ದುಷ್ಕರ್ಮಿಗಳು ಧಮ್ಕಿ ಹಾಕಿದ ಘಟನೆ ನಡೆದಿದೆ.
ಮಂಡ್ಯ ಮೂಲದ ಬಾಗೇಗೌಡನನ್ನು ಕಿಡ್ನ್ಯಾಪ್ ಮಾಡಿದ ಮಂಜುನಾಥ್ ಹಾಗೂ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ.
ಏನಿದು ಘಟನೆ..?
ಬಾಗೇಗೌಡ ಹಾಗೂ ಮಂಜುನಾಥ್ ಹುಲಗೂರು ಕಳೆದ 2 ವರ್ಷದಿಂದ ಸ್ನೇಹಿತರು. ಗ್ಲೋಬಲ್ ಲಿಮಿಡೆಟ್ ಕಂಪನಿಯಲ್ಲಿ ಬಾಗೇಗೌಡ ಹಾಗೂ ಮಂಜುನಾಥ್ ಹುಲಗೂರು ಹೂಡಿಕೆ ಮಾಡಿದ್ದರು. ಆದರೆ ಆ ಕಂಪನಿ ನಷ್ಟವಾಗಿ ಆ ಪ್ರಕರಣ ಸಿಐಡಿಯಲ್ಲಿದೆ. ಬಾಗೇಗೌಡನನ್ನು ನಂಬಿ ಹಣ ಹೂಡಿಕೆ ಮಾಡಿ ಸಿಟ್ಟಾಗಿದ್ದ ಮಂಜುನಾಥ್ ಹಣ ಕೊಡಿಸುವಂತೆ ಪೀಡಿಸಿದ್ದಾನೆ. ಹಣ ಕೊಡದಿದ್ದಕ್ಕೆ ಬಾಗೇಗೌಡನನ್ನು ಕಿಡ್ನ್ಯಾಪ್ ಮಾಡಿದ ಮಂಜುನಾಥ್ & ಗ್ಯಾಂಗ್ ಧಮ್ಕಿ ಹಾಕಿದೆ. ಹಣ ಕೊಡದಿದ್ರೆ ರೇಣುಕಾಸ್ವಾಮಿ ರೀತಿ ಕೊಲೆ ಆಗ್ತೀಯಾ ಎಂದು ಹೆದರಿಸಿ ಹಣದ ಅಗ್ರೀಮೆಂಟ್ ಬಲವಂತವಾಗಿ ಸಹಿ ಹಾಕಿಸಿಕೊಂಡು ವಿಡಿಯೋ ಮಾಡಿದ್ದಾರೆ.44 ಲಕ್ಷ ಹಣಕ್ಕೆ ಅಗ್ರೀಮೆಂಟ್ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
