ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ಕೆಲಸ ಆರಂಭಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
2026ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ನ ಪಶ್ಚಿಮ ಹಾಗೂ ಆಗ್ನೇಯ ಪದವೀಧರ ಮತ್ತು ಈಶಾನ್ಯ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗಳ ಸಿದ್ಧತೆಗಾಗಿ ಕೆಪಿಸಿಸಿ ವತಿಯಿಂದ ಭಾರತ್ ಜೋಡೋ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಕಾರ್ಯತಂತ್ರಗಳ ಕುರಿತು ಚರ್ಚಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ವಿಧಾನ ಪರಿಷತ್ ಚುನಾವಣೆಗೆ ಎಲ್ಲ ಕಾರ್ಯಕರ್ತರು ಈಗಿನಿಂದಲೇ ಕೆಲಸ ಮಾಡಲು ಆರಂಭಿಸಬೇಕು. ಮುಂದಿನ ಎಂಟು ಹತ್ತು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ. ಎಲ್ಲ ಆಕಾಂಕ್ಷಿಗಳ ಜೊತೆ ನಾನು ವೈಯಕ್ತಿಕವಾಗಿ ಇಂದು ಮತ್ತು ನಾಳೆ ಮಾತನಾಡುತ್ತೇನೆ. ಇದಾದ ಮೇಲೆ ಹೈ ಕಮಾಂಡ್ಗೆ ಶಿಫಾರಸುಗಳನ್ನು ಕಳಿಸುತ್ತೇನೆ ಎಂದರು.
You Might Also Like
TAGGED:ಚುನಾವಣೆ
