ಸಿಡ್ನಿಯಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಗೆ ಗಾಯವಾಗಿದ್ದು, ಬಿಸಿಸಿಐ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ.
ಹರ್ಷಿತ್ ರಾಣಾ ಅವರ ಬೌಲಿಂಗ್‌ನಲ್ಲಿ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡಲು ಕ್ಯಾಚ್ ತೆಗೆದುಕೊಳ್ಳುವಾಗ ಅಯ್ಯರ್ ಅವರ ಪಕ್ಕೆಲುಬಿಗೆ ಗಾಯವಾಗಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ.
ಅಯ್ಯರ್ ಅವರ ಆರೋಗ್ಯ ಸೂಕ್ಷ್ಮವಾಗಿದೆ. ಆದರೆ, ಸ್ಥಿರವಾಗಿದೆ ಮತ್ತು ಅವರನ್ನು ಐಸಿಯುನಿಂದ ಹೊರಗೆ ಸ್ಥಳಾಂತರಿಸಲಾಗಿದೆ. ಗಾಯದ ನಂತರ ಅವರನ್ನು ತಕ್ಷಣ ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಯಿತು, ಭಾರತೀಯ ತಂಡದ ವೈದ್ಯ ಡಾ. ರಿಜ್ವಾನ್ ಖಾನ್ ನಿರಂತರವಾಗಿ ಅವರ ಪಕ್ಕದಲ್ಲಿದ್ದು, ನಿಗಾ ವಹಿಸಿದ್ದಾರೆ. ಕೆಲವು ಸ್ಥಳೀಯ ಸ್ನೇಹಿತರು ಸಹ ಅವರೊಂದಿಗೆ ಇರುತ್ತಾರೆ, ವೀಸಾ ವಿಧಿವಿಧಾನಗಳು ಪೂರ್ಣಗೊಂಡ ನಂತರ ಕುಟುಂಬದ ಸದಸ್ಯರು ಮುಂಬೈನಿಂದ ಸಿಡ್ನಿಗೆ ತೆರಳಲಿದ್ದಾರೆ.
ಶ್ರೇಯಸ್ ಅಯ್ಯರ್ ಗಾಯದ ಕುರಿತು ಬಿಸಿಸಿಐ ಹೇಳಿಕೆ
ಅಕ್ಟೋಬರ್ 27 ರ ಸೋಮವಾರದಂದು ಬಿಸಿಸಿಐ ಶ್ರೇಯಸ್ ಅಯ್ಯರ್ ಅವರ ಗಾಯದ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿತು, “ಸ್ಕ್ಯಾನಿಂಗ್‌ನಲ್ಲಿ ಗುಲ್ಮಕ್ಕೆ(Spleen) ಗಾಯವಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ, ವೈದ್ಯಕೀಯವಾಗಿ ಸ್ಥಿರರಾಗಿದ್ದಾರೆ ಮತ್ತು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಸಿಡ್ನಿ ಮತ್ತು ಭಾರತದ ತಜ್ಞರೊಂದಿಗೆ ಸಮಾಲೋಚಿಸಿ ಅವರ ಗಾಯದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯ ತಂಡದ ವೈದ್ಯರು ಶ್ರೇಯಸ್ ಅವರೊಂದಿಗೆ ಸಿಡ್ನಿಯಲ್ಲಿಯೇ ಇರುತ್ತಾರೆ, ಅವರ ದೈನಂದಿನ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತಾರೆ.” ಎಂದು ತಿಳಿಸಿದೆ.
ಗುಲ್ಮ ಎಂದರೇನು ಮತ್ತು ಅದರ ಕಾರ್ಯವೇನು?
ಗುಲ್ಮವು(Spleen) ಮೃದುವಾದ, ಮುಷ್ಟಿಯ ಗಾತ್ರದ ಅಂಗವಾಗಿದ್ದು ಅದು ಪಕ್ಕೆಲುಬುಗಳ ಎಡಭಾಗದ ಕೆಳಗೆ ಇರುತ್ತದೆ. ಇದು ಎರಡು ಮುಖ್ಯ ಕೆಲಸಗಳನ್ನು ಹೊಂದಿದೆ; ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಹಳೆಯ ಅಥವಾ ಹಾನಿಗೊಳಗಾದ ಕೆಂಪು ರಕ್ತ ಕಣಗಳನ್ನು ತೆಗೆದುಹಾಕುವ ಮೂಲಕ ರಕ್ತವನ್ನು ಶೋಧಿಸಲು ಸಹಾಯ ಮಾಡುತ್ತದೆ. ಇದು ರಕ್ತನಾಳಗಳಿಂದ ತುಂಬಿರುವುದರಿಂದ, ಇದು ದೇಹದ ಅತ್ಯಂತ ಸೂಕ್ಷ್ಮವಾದ ಅಂಗಗಳಲ್ಲಿ ಒಂದಾಗಿದೆ.
ಅದಕ್ಕಾಗಿಯೇ ನಿಮ್ಮ ಎಡಭಾಗದಲ್ಲಿ ಬಲವಾಗಿ ಬೀಳುವುದು ಅಥವಾ ಪಕ್ಕೆಲುಬುಗಳಿಗೆ ಪೆಟ್ಟಾಗುವಂತಹ ಬಲವಾದ ಹೊಡೆತವು ಅದು ಹರಿದು ದೇಹದೊಳಗೆ ರಕ್ತಸ್ರಾವಕ್ಕೆ ಕಾರಣವಾಗಬಹುದು. ವೈದ್ಯರು ಇದನ್ನು ಸ್ಪ್ಲೇನಿಕ್ ಲೇಸರ್ ಎಂದು ಕರೆಯುತ್ತಾರೆ.
🚨 GOOD NEWS ON SHREYAS IYER 🚨
— Johns. (@CricCrazyJohns) October 28, 2025
– He has been moved out of the ICU. [Abhishek Tripathi]
BCCI medical team did a tremendous job for the very soon recovery of Shreyas Iyer. pic.twitter.com/EpJXnORmYd
Shreyas SUPERMAN Iyer! 💪
— Star Sports (@StarSportsIndia) October 25, 2025
Puts his body on the line for #TeamIndia and gets the much needed wicket. 🙌💙#AUSvIND 👉 3rd ODI | LIVE NOW 👉 https://t.co/0evPIuAfKW pic.twitter.com/LCXriNqYFy
Wishing @ShreyasIyer15 a quick recovery. His unwavering spirit and commitment to the game are truly admirable. Looking forward to seeing him back on the field soon, stronger than ever. @BCCI
— Rajeev Shukla (@ShuklaRajiv) October 27, 2025
