ALERT : ಉದ್ಯೋಗಾಂಕ್ಷಿಗಳೇ ಎಚ್ಚರ : ಬೆಳಗಾವಿಯಲ್ಲಿ ‘ವರ್ಕ್ ಫ್ರಮ್ ಹೋಂ’ ಹೆಸರಲ್ಲಿ 8000 ಮಹಿಳೆಯರಿಗೆ 12 ಕೋಟಿ ರೂ ವಂಚನೆ.!

ದುನಿಯಾ ಡಿಜಿಟಲ್ ಡೆಸ್ಕ್ : ಉದ್ಯೋಗಾಂಕ್ಷಿಗಳೇ ಎಚ್ಚರ..! ವರ್ಕ್ ಫ್ರಮ್ ಹೋಂ ಕೆಲಸಕ್ಕೆ ಅರ್ಜಿ ಹಾಕುವಾಗ ಹುಷಾರ್ ಆಗಿರಬೇಕು..! ಇಲ್ಲವಾದಲ್ಲಿ ಇಂತಹ ವಂಚನೆಗಳು ನಡೆಯುತ್ತದೆ. ಬೆಳಗಾವಿಯಲ್ಲಿ ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ 8000 ಮಹಿಳೆಯರಿಗೆ ಬರೋಬ್ಬರಿ 12 ಕೋಟಿ ರೂ ವಂಚನೆ ಎಸಗಿದ ಘಟನೆ ಬೆಳಕಿಗೆ ಬಂದಿದೆ.

ಹೌದು, ವರ್ಕ್ ಫ್ರಂ ಹೋಂ ಕೆಲಸ ಕೊಡುವುದಾಗಿ ಹೇಳಿ 8000 ಮಹಿಳೆಯರಿಗೆ ವ್ಯಕ್ತಿಯೋರ್ವ ಬರೋಬ್ಬರಿ 12 ಕೋಟಿಗೂ ಅಧಿಕ ಹಣ ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಕೋಲೇಕರ್ ಎಂಬಾತ ಮಹಿಳೆಯರಿಗೆ ಅಗರಬತ್ತಿ ಪ್ಯಾಕಿಂಗ್ ಕೆಲಸ ಕೊಡುವುದಾಗಿ ಮನೆಯಿಂದಲೇ ಈ ಕೆಲಸ ಮಾಡಬಹುದು ಎಂದು ಹೇಳಿ ಮೊದಲು ಮಹಿಳೆಯಿಂದ ಹಣ ಸಂಗ್ರಹಿಸಿದ್ದಾನೆ. ಹೀಗೆ ಕೋಟಿ ಕೋಟಿ ಹಣ ಸಂಗ್ರಹಿಸಿದ ವಂಚಕ ಬಳಿಕ ನಾಪತ್ತೆಯಾಗಿದ್ದಾನೆ.ಹಣ ಕಳೆದುಕೊಂಡಿರುವ ಮಹಿಳೆಯರು ಬೆಳಗಾವಿ ಠಾಣೆಗೆ ದೂರು ನೀಡಿದ್ದು, ಆರೋಪಿ ಬಂಧಿಸಿ ನಮ್ಮ ಹಣ ವಾಪಸ್ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಎಂಬಾತ ತನ್ನನ್ನು ಅಜಯ್ ಪಾಟೀಲ್ ಎಂದು ಪರಿಚಯಿಸಿಕೊಂಡಿದ್ದು, ಅಗರಬತ್ತಿ ಪ್ಯಾಕಿಂಗ್ ಮೂಲಕ ಹಣ ಗಳಿಸಬಹುದು ಎಂದು ಹೇಳಿದ್ದಾನೆ. ಅದಕ್ಕಾಗಿ ಗುರುತಿನ ಚೀಟಿ ಮಾಡಿಸಬೇಕು ಎಂದು ಒಬ್ಬೊಬ್ಬ ಮಹಿಳೆಯರಿಂದ ಒಂದು ಗುರುತಿನ ಚೀಟಿಗೆ 2500ರಿಂದ 5000ವರೆಗೂ ಹಣ ಪಡೆದಿದುಕೊಂಡಿದ್ದಾನೆ. ಪ್ರತಿಯೊಬ್ಬ ನೇಮಕಾತಿದಾರರು ಚೈನ್-ಮಾರ್ಕೆಟಿಂಗ್ ವ್ಯವಸ್ಥೆಯಡಿಯಲ್ಲಿ ಇನ್ನಿಬ್ಬರು ವ್ಯಕ್ತಿಗಳನ್ನು ಸಂಪರ್ಕಿಸುವಂತೆ ಒತ್ತಾಯಿಸಿದ್ದಾನೆ. ಸ್ವಸಹಾಯ ಮಹಿಳಾ ಗುಂಪುಗಳನ್ನು ಗುರಿಯಾಗಿಸಿಕೊಂಡು ಚೈನ್-ಮಾರ್ಕೆಟಿಂಗ್ ಮಾದರ್ಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ್ದ. ಪ್ರತಿ ಮಹಿಳೆಯರ ಮನೆಗಳಿಗೆ ಅಗರಬತ್ತಿ ತಲುಪಿಸಲು ಆಟೋ ಬಾಡಿಗೆಗೆ 2500ರಿಂದ 5000 ರೂ ಮುಂಗಡ ಹಣ ಬೇರೆ ಪಡೆದಿದ್ದಾನೆ. ಹೀಗೆ ಹಣ ಪಡೆದುಕೊಂಡು ಹೋದವನು ನಾಪತ್ತೆಯಗೈದ್ದಾನೆ. ಅಗರಬತ್ತಿಯೂ ಇಲ್ಲ, ಕೊಟ್ಟ ಹಣವೂ ಇಲ್ಲದಿದ್ದಾಗ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read