ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) 2025- 26 ನೇ ಸಾಲಿನ ನಾನಾ ಸೆಮಿಸ್ಟರ್ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.
ನವೆಂಬರ್ 20 ರಿಂದ ಜನವರಿ 6ರವರೆಗೆ ಪರೀಕ್ಷೆಗಳು ನಡೆಯಲಿವೆ. ಬಿಇ, ಬಿಟೆಕ್, ಬಿಎಸ್ಸಿ(ಆನರ್ಸ್), ಬಿ ಡಿಸೈನ್, ಬಿಆರ್ಕ್, ಬಿ ಪ್ಲಾನ್ 2018 ರಿಂದ 2022 ರವರೆಗಿನ ಬ್ಯಾಚ್ ನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ನಿಗದಿಪಡಿಸಿದ ಪರೀಕ್ಷಾ ವೇಳಾಪಟ್ಟಿ ಇದಾಗಿದೆ.
ಈ ಪರೀಕ್ಷಾ ವೇಳಾಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ವಿದ್ಯಾರ್ಥಿಗಳು ಅಕ್ಟೋಬರ್ 29ರೊಳಗೆ qpds2@vtu.ac.in ಇ-ಮೇಲ್ ವಿಳಾಸಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ. ವಿಟಿಯು ವ್ಯಾಪ್ತಿಯಲ್ಲಿರುವ ಕಾಲೇಜುಗಳು ನೋಟಿಸ್ ಬೋರ್ಡ್ ನಲ್ಲಿ ವೇಳಾಪಟ್ಟಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಕೋರಲಾಗಿದೆ.
