ಬೆಂಗಳೂರು: ಫ್ಯಾಷನ್ ಡಿಸೈನರ್ ಓರ್ವರಿಗೆ ಪ್ರೀತಿಸುವಂತೆ ಒತ್ತಾಯ್ಸಿ ಇವಿಪಿ ಫಿಲ್ಮ್ ಸಿಟಿ ಮಾಲೀಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ತಮಿಳುನಾಡಿನ ಇವಿಪಿ ಫಿಲ್ಮ್ ಸಿಟಿ ಮಾಲೀಕ ಸಂತೋಷ್ ರೆಡ್ಡಿ ಫ್ಯಾಷನ್ ಡಿಸೈನರ್ ಓರ್ವರಿಗೆ ಕಿರುಕುಳ ನೀಡಿದ್ದು, ಈ ಬಗ್ಗೆ ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಿಲ್ಮ್ ಸಿಟಿ ಮಾಲೀಕ ಸಂತೋಷ್ ರೆಡ್ಡಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಫ್ಯಾಷನ್ ಡಿಸೈನರ್ ಸಂತೋಷ್ ರೆಡ್ದಿ ಪ್ರೀತಿ ನಿರಾಕರಿಸಿದ್ದರು. ಇದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕಸಿನ್ ಮದುವೆಗೆ ಡಿಸೈನರ್ ಬಟ್ಟೆ ಬೇಕು ಎಂದು ಫ್ಯಾಷನ್ ಡಿಸೈನರ್ ಸಂಪರ್ಕ ಮಾಡಿದ್ದ ಸಂತೋಷ್ ರೆಡ್ಡಿ ಬಳಿಕ ನಿಮ್ಮ ಬ್ಯುಸಿನೆಸ್ ಗೆ ಬಂಡವಾಳ ಹೂಡುವುದಾಗಿ ಹೇಳಿ ಸ್ನೇಹ ಬೆಳೆಸಿದ್ದ. ಫ್ಯಾಮಿಲಿ ಫ್ರೆಂಡ್ ಎಂಬಷ್ಟರಮಟ್ಟಿಗೆ ಹತ್ತಿರವಾಗಿದ್ದ. ಬಳಿಕ ತನ್ನ ಮಗಳಿಗೆ ಮದುವೆ ಮಾಡಬೇಕು, ಗಂಡು ಇದ್ದರೆ ಹೇಳಿ ಎಂದು ಫ್ಯಾಷನ್ ಡಿಸೈನರ್ ಗೆ ಇನ್ನಷ್ಟು ಹತ್ತಿರನಾಗಿದ್ದಾನೆ.
ಹೀಗೆ ಆರಂಭವಾದ ಸ್ನೇಹದಲ್ಲಿ ಸಂತೋಷ್ ರೆಡ್ದಿ ಒಂದು ದಿನ ತನ್ನ ಮಗಳು ತನ್ನ ಜೊತೆ ಮಾತನಾಡುತ್ತಿಲ್ಲ, ಮಾತು ಬಿಟ್ಟಿದ್ದಾಳೆ ಎಂದು ಮಹಿಳೆ ಇದ್ದ ಬೆಂಗಳೂರಿನ ನಿವಾಸಕ್ಕೆ ಬಂದಿದ್ದನಂತೆ. ನನಗೆ ಸಹಾಯ ಮಾಡಿ ಎಂದು ಇಮೋಷನಲ್ ಆಗಿ ನಾಟಕವಾಡಿದ್ದ. ಮಹಿಳೆ ಸಮಾಧಾನ ಮಾಡಿದ್ದರಂತೆ. ಈ ವೇಳೆ ತಾನು ನಿನ್ನನ್ನು ಪ್ರೀತಿಸುತ್ತೇನೆ. ನೀನೂ ಪ್ರೀತಿಸಬೇಕು ಎಂದು ಬಲವಂತ ಮಾಡತೊಡಗಿದ್ದನಂತೆ. ಮಹಿಳೆ ನಿರಾಕರಿಸಿದ್ದಕ್ಕೆ ನಿನ್ನನ್ನು ನಿನ್ನ ಮಕ್ಕಳನ್ನು ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
