ಬೆಂಗಳೂರು : ಸಿಎಂ ಸಿದ್ದರಾಮಯ್ಯ ಬಂಗಾರಪ್ಪನವರ ಚಿರಶಾಂತಿ ಸ್ಥಳ “ಬಂಗಾರಧಾಮ”ದ ಗೀತಚಿತ್ರ ಬಿಡುಗಡೆಗೊಳಿಸಿದರು.ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಚಿರಶಾಂತಿಯ ಸ್ಥಳ “ಬಂಗಾರಧಾಮ”ದ ಗೀತಚಿತ್ರವನ್ನು ಶುಕ್ರವಾರ ಬಿಡುಗಡೆಗೊಳಿಸಿ, ಬಂಗಾರಪ್ಪನವರ ಸೇವೆ – ಸಾಧನೆಗಳನ್ನು ಸ್ಮರಿಸಿದರು.
ಈ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ಕೊಟ್ಟು ಸುಸ್ಥಿರ ಅಭಿವೃದ್ಧಿಯ ನವಯುಗಕ್ಕೆ ಮುನ್ನುಡಿ ಬರೆದ ಸಮಾಜವಾದಿ ಚಿಂತನೆಯ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಚಿರಶಾಂತಿಯ ಸ್ಥಳ “ಬಂಗಾರಧಾಮ”ದ ಗೀತಚಿತ್ರವನ್ನು ಶುಕ್ರವಾರ ನನ್ನ ನಿವಾಸದಲ್ಲಿ ಬಿಡುಗಡೆಗೊಳಿಸಿ, ಬಂಗಾರಪ್ಪನವರ ಸೇವೆ – ಸಾಧನೆಗಳನ್ನು ಸ್ಮರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ಕೊಟ್ಟು ಸುಸ್ಥಿರ ಅಭಿವೃದ್ಧಿಯ ನವಯುಗಕ್ಕೆ ಮುನ್ನುಡಿ ಬರೆದ ಸಮಾಜವಾದಿ ಚಿಂತನೆಯ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಚಿರಶಾಂತಿಯ ಸ್ಥಳ "ಬಂಗಾರಧಾಮ"ದ ಗೀತಚಿತ್ರವನ್ನು ಶುಕ್ರವಾರ ನನ್ನ ನಿವಾಸದಲ್ಲಿ ಬಿಡುಗಡೆಗೊಳಿಸಿ, ಬಂಗಾರಪ್ಪನವರ ಸೇವೆ – ಸಾಧನೆಗಳನ್ನು ಸ್ಮರಿಸಿದೆ.… pic.twitter.com/JxBAMn23Bp
— Siddaramaiah (@siddaramaiah) October 25, 2025
