ಬಳ್ಳಾರಿ: ಶಬರಿಮಲೆ ಐಯ್ಯಪ್ಪ ದೇವಸ್ಥಾನದ 4 ಕೆಜಿ ಚಿನ್ನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಅಧಿಕಾರಿಗಳು ಬಳ್ಳಾರಿಯಲ್ಲಿಯೂ ದಾಳಿ ನಡೆಸಿದ್ದಾರೆ.
ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಅಂಗಡಿ ಮೇಲೆ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೊದ್ದಂ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್, ಶಬರಿಮಲೆಯಲ್ಲಿ ಚಿನ್ನ ಕಳುವು ಪ್ರಕರಣದ 476 ಗ್ರಾಂ ಚಿನ್ನವನ್ನು ಖರೀದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗೋವರ್ಧನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಎಸ್ ಐಟಿ ಅಧಿಕಾರಿಗಳು ಇದೀಗ ಗೋವರ್ಧನ್ ಅವರ ರೊದ್ದಂ ಚಿನ್ನದ ಮಳಿಗೆ ಮೇಲೆ ದಾಳಿ ನಡೆಸಿದೆ.
ದಾಳಿ ವೇಳೆ ಚಿನ್ನವನ್ನು ವಶಕ್ಕೆ ಪಡೆದಿರುವ ಎಸ್ ಐಟಿ ಅಧಿಕಾರಿಗಳು ಸದ್ಯಕ್ಕೆ ರೊದ್ದಂ ಜ್ಯುವೆಲ್ಲರಿ ಶಾಪ್ ಗೆ ಬೀಗ ಹಾಕಿದ್ದಾರೆ
