ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಉತ್ತರಾಧಿಕಾರಿ ಎಂಬ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಹೆಸರನ್ನು ಯಾಕೆ ಎಳೆದು ತರುತ್ತಿದ್ದೀರಿ? ನಾಯಕತ್ವ ವಹಿಸಿಕೊಳ್ಳಿ ಎಂದು ಹೈಕಮಾಂಡ್ ಹೇಳಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಹದೇವಪ್ಪ, ಕಾಂಗ್ರೆಸ್ ಇರುವುದೇ ಐಡಿಯಾಲಜಿಗೋಸ್ಕರ. ಇಂಧಿರಾಗಾಂಧಿ ನಿದನದ ಬಳಿಕ ನಾಯಕತ್ವದ ಪ್ರಶ್ನೆ ಬಂತು. ಆಗ ಸಾಕಷ್ಟು ಜನ ಹುಟ್ಟಿಕೊಂಡರು. ಈ ವ್ಯವಸ್ಥೆಯಲ್ಲಿ ಯಾರೂ ಕೂಡ ಅನಿವಾರ್ಯ ಅಲ್ಲ. ಉಳಿದವೆಲ್ಲವೂ ಕೇವಲ ಚರ್ಚೆ ವಿಷಯ ಎಂದರು.
ಕರ್ನಾಟಕ ಕಾಂಗ್ರೆಸ್ ನಲ್ಲಿ ಯಾವಾಗ ಯಾರಿಗೆ ನಾಯಕತ್ವ ಕೊಡಬೇಕು ಎಂಬುದನ್ನು ಹೈಕಾಂಡ್ ತೀರ್ಮಾನಿಸುತ್ತೆ. ಬೇರೆ ಯಾರೇ ಏನೂ ಮಾತನಾಡಿದರೂ ಅದಕ್ಕೆ ಅರ್ಥವಿಲ್ಲ. ಯತೀಂದ್ರ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರ ಹೇಳಿಕೆಗೆ ಅವರನ್ನೇ ಕೇಳಿ ಎಂದರು.
