ಕಲಬುರಗಿ: ಸಿಸಿಬಿ ಪೊಲೀಸರು ದಿವ್ಯಾ ಹಾಗರಗಿ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿರುವ ದಿವ್ಯಾ ಮನೆ ಮೇಲೆ ದಾಳಿ ನಡೆಸಲಾಗಿದೆ.
ಪಿಎಸ್ಐ ನೇಮಕಾತಿ ಹಗರಣದ ಆರೋಪಿಯಾಗಿರುವ ಬಿಜೆಪಿ ಉಚ್ಚಾಟಿತ ನಾಯಕಿ ದಿವ್ಯಾ ಹಾಗರಗಿ ಅವರ ಮನೆಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ವೇಳೆಯಲ್ಲಿ ಆರು ಜೂಜುಕೋರರನ್ನು ಬಂಧಿಸಲಾಗಿದ್ದು, 42,000 ರೂ. ಜಪ್ತಿ ಮಾಡಲಾಗಿದೆ.
ದಿವ್ಯಾ ಹಾಗರಗಿ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜು ಲೇಂಗಟಿ ಸ್ವೀಟ್ ಆಡುತ್ತಿದ್ದರು, ರವೀಂದ್ರ ಮಾನಕರ್, ಭಗವಾನ್, ಸಂಗಮೇಶ ನಾಗಹಳ್ಳಿ, ಶಿವಶರಣಪ್ಪ, ಮಲ್ಲಿನಾಥನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಸ್ಟೇಷನ್ ಬಜಾರ್ ಠಾಣೆಗೆ ಕರೆತಂದು ಕೇಸು ದಾಖಲಿಸಲಾಗಿದೆ. ನಂತರ ಸ್ಟೇಷನ್ ಬೇಲ್ ಮೇಲೆ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.