ಬೆಂಗಳೂರು: ತಿಗಣೆ ಔಷಧಿ ವಾಸನೆಯಿಂದ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಪಿಜಿ ರೂಮಿನಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಿರುಪತಿ ಮೂಲದ ಪವನ್ ಮೃತ ವಿದ್ಯಾರ್ಥಿ. ಹೆಚ್ ಎ ಎಲ್ ಬಳಿ ಪಿಜಿಯಲ್ಲಿ ವಾಸವಾಗಿದ್ದ ಪವನ್ ಬಿ.ಟೆಕ್ ಓದುತ್ತಿದ್ದ. ನಿನ್ನೆ ಪಿಜಿಯಲ್ಲಿ ಸಿಬ್ಬಂದಿಗಳು ತಿಗಣೆ ಔಷಧಿ ಸಿಂಪಡಿಸಿದ್ದರು. ತಿಗಣೆ ಔಷಧಿ ಸಿಂಪಡಿಸಿದ್ದು ತಿಳಿಯದೇ ಪವನ್ ಪಿಜಿ ರೂಮಿಗೆ ಆಗಮಿಸಿದ್ದ.
ಇಂದು ಪಿಜಿ ರೂಮಿನಲ್ಲಿಯೇ ಪವನ್ ಶವವಾಗಿ ಪತ್ತೆಯಾಗಿದ್ದಾನೆ. ತಿಗಣೆ ಔಷಧಿ ವಾಸನೆಯಿಂದ ಅಸ್ವಸ್ಥನಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.