ರಾಮನಗರ : ರಾಜ್ಯದಲ್ಲಿ ಪತ್ನಿ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡ ರಾಮನಗರದಲ್ಲಿ ನಡೆದಿದೆ.
ಹೌದು. ಪತ್ನಿ ಕಿರುಕುಳ ತಾಳಲಾರದೇ, ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಡದಿ ರೈಲು ನಿಲ್ದಾಣದ ಸಮೀಪ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಕುಮಾರ್ ( 30) ಎಂದು ಗುರುತಿಸಲಾಗಿದೆ. ಇವರು ಕಳೆದ 5 ತಿಂಗಳಷ್ಟೇ ಮಲ್ಲಿಕಾ ಎಂಬುವವರನ್ನು ಮದುವೆಯಾಗಿದ್ದರು. ಮೊದಲು ಚೆನ್ನಾಗಿಯೇ ಸಂಸಾರ ಸಾಗುತ್ತಿತ್ತು. ಆದರೆ ಬರು ಬರುತ್ತಾ ಗಂಡ ಹೆಂಡತಿ ನಡುವೆ ಜಗಳ ಉಂಟಾಗಿದೆ ಎನ್ನಲಾಗಿದೆ.
ನನಗೆ ಬದುಕಲು ಆಗುತ್ತಿಲ್ಲ, ನನಗೆ ನನ್ನ ಹೆಂಡತಿ ತುಂಬಾ ಕಿರುಕುಳ ನೀಡುತ್ತಿದ್ದಾಳೆ, ನನ್ನ ಸಾವಿಗೆ ನನ್ನ ಪತ್ನಿಯೇ ಕಾರಣ ಎಂದು ವಿಡಿಯೋ ಮಾಡಿ ಅವರು ಸೂಸೈಡ್ ಮಾಡಿಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,
