ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಪತ್ನಿ ಗೌರಿ ಖಾನ್ ದೀಪಾವಳಿ ಪೂಜೆ ಮಾಡುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ.
“ಎಲ್ಲರಿಗೂ ದೀಪಾವಳಿಯ ಶುಭಾಶಯಗಳು! ದೇವಿ ಲಕ್ಷ್ಮಿ ನಿಮಗೆ ಸಮೃದ್ಧಿ ಮತ್ತು ಸಂತೋಷವನ್ನು ನೀಡಲಿ. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಶಾಂತಿಯನ್ನು ಹಾರೈಸಲಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಈ ವರ್ಷ, ಖಾನ್ ತಮ್ಮ ನಿವಾಸ ಮನ್ನತ್‌ನಲ್ಲಿ ಸಾಂಪ್ರದಾಯಿಕ ದೀಪಾವಳಿ ಪಾರ್ಟಿಯನ್ನು ಆಯೋಜಿಸಲಿಲ್ಲ, ಇದು ಬಾಲಿವುಡ್‌ನ ಹಬ್ಬದ ಕ್ಯಾಲೆಂಡರ್‌ನಲ್ಲಿ ಬಹು ನಿರೀಕ್ಷಿತ ಕಾರ್ಯಕ್ರಮವಾಗಿದೆ. ಮೂಲಗಳ ಪ್ರಕಾರ, ಮುಂಬೈ ಬಂಗಲೆಯಲ್ಲಿ ನಡೆಯುತ್ತಿರುವ ನವೀಕರಣಗಳು ಈ ಬದಲಾವಣೆಗೆ ಕಾರಣವಾಗಿದ್ದು, ತಾರೆ ತಮ್ಮ ಕುಟುಂಬದೊಂದಿಗೆ ಸರಳವಾಗಿ ಹಬ್ಬ ಆಚರಿಸಿದ್ದಾರೆ.
ಬಾಲಿವುಡ್ ನ ಅತಿದೊಡ್ಡ ದೀಪಾವಳಿ ಪಾರ್ಟಿ ಆಯೋಜಿಸುವಲ್ಲಿ ಹೆಸರುವಾಸಿಯಾದ ಶಾರುಖ್ ಖಾನ್, ಈ ವರ್ಷ ತಮ್ಮ ಆಚರಣೆಗಳನ್ನು ಸರಳವಾಗಿರಿಸಿದ್ದಾರೆ. ಅವರ ನಿವಾಸವಾದ ಮನ್ನತ್‌ನಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯಿಂದಾಗಿ ಸರಳವಾಗಿ ಆಚರಿಸಿದ್ದರೂ ಪ್ರತಿ ವರ್ಷದಂತೆ ಅಭಿಮಾನಿಗಳಿಗೆ ತಮ್ಮ ಶುಭಾಶಯಗಳನ್ನು ಹಂಚಿಕೊಳ್ಳಲು ಮರೆಯಲಿಲ್ಲ.
