ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಟೀಂ ಇಂಡಿಯಾ: ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಭರ್ಜರಿ ಜಯ

ಪರ್ತ್: ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಆಸ್ಟ್ರೇಲಿಯಾ ಭರ್ಜರಿ 7 ವಿಕೆಟ್ ಗಳಿಂದ(DLS Method) ಜಯಗಳಿಸಿ ಶುಭಾರಂಭ ಮಾಡಿದೆ.

ಮಾರ್ಚ್ ನಲ್ಲಿ ಚಾಂಪಿಯನ್ ಟ್ರೋಫಿಯಲ್ಲಿ ಆಡಿದ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 26 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ರೋಹಿತ್ ಶರ್ಮಾ 8, ಶುಭಮನ್ ಗಿಲ್ 10, ವಿರಾಟ್ ಕೊಹ್ಲಿ 0, ಶ್ರೇಯಸ್ ಅಯ್ಯರ್ 11, ಅಕ್ಷರ್ ಪಟೇಲ್ 31, ಕೆ.ಎಲ್. ರಾಹುಲ್ 38, ವಾಷಿಂಗ್ಟನ್ ಸುಂದರ್ 10, ನಿತೀಶ್ ಕುಮಾರ್ ರೆಡ್ಡಿ 19, ಹರ್ಷಿತ್ ರಾಣಾ 1, ಆರ್ಶ್ ದೀಪ್ ಸಿಂಗ್ 0, ಮೊಹಮ್ಮದ್ ಸಿರಾಜ್ ಅಜೇಯ 0 ರನ್ ಗಳಿಸಿದ್ದಾರೆ. ಆಸೀಸ್ ಪರವಾಗಿ ಜೋಶ್ ಹೇಜಲ್ ವುಡ್, ಮಿಚೆಲ್ ಓವೆನ್, ಮ್ಯಾಥ್ಯೂ ಕುಹ್ನೇಮನ್ ತಲಾ 2 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ಆಸ್ಟೇಲಿಯಾ 21.1 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಮಿಚೆಲ್ ಮಾರ್ಷ್ ಅಜೇಯ 46, ಟ್ರಾವಿಸ್ ಹೆಡ್ 8, ಮ್ಯಾಥ್ಯೂ ಶಾರ್ಟ್ 8, ಜೋಸ್ ಪಿಲಿಪ್ಪೆ 37, ಮ್ಯಾಥ್ ರೆನ್ ಶಾ ಅಜೇಯ 21 ರನ್ ಗಳಿಸಿದರು. ಭಾರತದ ಪರ ಆರ್ಶ್ ದೀಪ್ ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.

ಆಸ್ಟ್ರೇಲಿಯಾ ಪರ್ತ್‌ನಲ್ಲಿ ನಡೆದ ಮೂರು ಪಂದ್ಯಗಳ ODI ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಯಿತು. ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್ ಭಾರತದ ಅಗ್ರ ಕ್ರಮಾಂಕವನ್ನು ಚೇತರಿಸಿಕೊಳ್ಳುವ ಮೊದಲೇ ಪೆವಿಲಿಯನ್ ಗೆ ಕಳಿಸಿದರು.

ಮಳೆಯ ಅಡಚಣೆಗಳ ನಂತರ ಭಾರತ ಚೇತರಿಸಿಕೊಳ್ಳಲಿಲ್ಲ. ಅಕ್ಷರ್ ಪಟೇಲ್ ಮತ್ತು ಕೆಎಲ್ ರಾಹುಲ್ ಅವರ ಸಣ್ಣ ಪ್ರತಿರೋಧ ಮತ್ತು ನಿತೀಶ್ ರೆಡ್ಡಿ ಅವರ ತಡವಾದ ಸ್ಫೋಟವು 26 ಓವರ್‌ಗಳಲ್ಲಿ 136 ರನ್‌ ಗಳಿಸಲು ಸಾಧ್ಯವಾಯಿತು. ಆದರೆ ಆಸ್ಟ್ರೇಲಿಯಾಕ್ಕೆ ಅದರು ತೀರಾ ಕಡಿಮೆ ಗುರಿಯಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read