ಬೆಂಗಳೂರು : ಬೆಂಗಳೂರಿನ ‘ಲಾಡ್ಜ್’ ಗೆ ಪ್ರೇಯಸಿ ಜೊತೆ ಬಂದಿದ್ದ ಪುತ್ತೂರು ಮೂಲದ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಪುತ್ತೂರಿನಿಂದ ಬಂದಿದ್ದ ಯುವಕ ತಕ್ಷಿತ್ ವಿರಾಜಪೇಟೆಯ ಯುವತಿ ರಕ್ಷಿತಾ ಜೊತೆ ಲಾಡ್ಜ್ ಮಾಡಿಕೊಂಡಿದ್ದನು. ಯುವಕನ ಸಾವಿಗೂ ಮುನ್ನ ಯುವತಿ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾಳೆ ಎನ್ನಲಾಗಿದೆ.
ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿದ ಪ್ರೇಮಿಗಳು ಒಟ್ಟಿಗೆ ಊಟ ಮಾಡಿದ್ದರು. ನಂತರ ಇಬ್ಬರಿಗೆ ಫುಡ್ ಪಾಯ್ಸಿನ್ ಆಗಿ ಮಾತ್ರೆಗಳನ್ನು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ.
ಆದರೆ ಯುವಕ ತಕ್ಷಿತ್ ಮಾತ್ರ ಮೃತಪಟ್ಟಿದ್ದಾನೆ. 8 ದಿನವೂ ಊಟ ತರಿಸಿಕೊಂಡು ಊಟ ಮಾಡಿದ್ದರು. ನಂತರ ಮೆಡಿಕಲ್ ಗೆ ಹೋಗಿ ಇಬ್ಬರು ಮಾತ್ರೆಗಳನ್ನು ಸೇವಿಸಿದ್ದಾರೆ.ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ತಕ್ಷಿತ್ ಮಾತ್ರ ಮಲಗಿದ್ದವನು ಮತ್ತೆ ಏಳಲೇ ಇಲ್ಲ. ಯುಡಿಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಯುವಕನ ಸಾವಿಗೆ ತನಿಖೆಯಿಂದಷ್ಟೇ ಕಾರಣ ತಿಳಿದು ಬರಬೇಕಿದೆ.