BREAKING: ಮತದಾರರ ಪಟ್ಟಿಗೆ ಬೆಂಕಿ ಹಚ್ಚಿ ನದಿಗೆ ಎಸೆದ ದುರುಳರು: ಶಾಖಾಪುರ ಸೇತುವೆ ಬಳಿ ಸುಟ್ಟಿರುವ ವೋಟರ್ ಲಿಸ್ಟ್ ಗಳು ಪತ್ತೆ

ಕಲಬುರಗಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಪುಷ್ಠಿ ನೀಡುವಂತಹ ಘಟನೆಗಳು ಕಲಬುರಗಿ ಜಿಲ್ಲೆಯ ಆಳಂದಲ್ಲಿ ನಡೆದಿದೆ. ಮತದಾರರ ಪಟ್ಟಿ, ದಾಖಲೆಗಳನ್ನು ಸುಟ್ಟು ಹಾಕಲಾಗಿದ್ದು, ಅರ್ಧ ಸುಟ್ಟಿರುವ ದಾಖಲೆಗಳು ಪತ್ತೆಯಾಗಿವೆ.

ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ನಿನ್ನೆ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದರ ಹಾಗೂ ಅವರ ಮಗನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆಳಂದ ಹೊರವಲಯದ ಶಾಖಾಪುರ ಸೇತುವೆ ಬಳಿ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ದಾಖಲೆಗಳ ರಾಶಿಗೆ ಬೆಂಕಿ ಹಚ್ಚಿ ಅಮರ್ಜಾ ನದಿಗೆ ಎಸೆದಿರುವುದು ಪತ್ತೆಯಾಗಿದೆ.

ಗೂಡ್ಸ್ ವಾಹನವೊಂದರಲ್ಲಿ ದಾಖಲೆಗಳನ್ನು ಕೊಂಡೊಯ್ದು ಸೇತುವೆ ಬಳಿ ದಾಖಲೆಗಳ ಬಂಡಲ್ ಗೆ ಬೆಂಕಿ ಹಚ್ಚಿ ಬಳಿಕ ದಾಖಲೆಗಳನ್ನು ನದಿಗೆ ಎಸೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯ ಪುರಾವೆಗಳು ನದಿ ಬಳಿ ಪತ್ತೆಯಾಗಿದೆ. ಮೂಟೆಗಳಲ್ಲಿರುವ ದಾಅಖಲೆಗಳಿಗೆ ಬೆಂಕಿ ಹಚ್ಚಿದ್ದು, ಅರ್ಧ ಸುಟ್ಟಿರುವ ವೋಟರ್ ಲಿಸ್ಟ್ ಗಳು ಪತ್ತೆಯಾಗಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ ಐಟಿ ಅಧಿಕಾರಿಗಳು ಸುಟ್ಟಿರುವ ದಾಖಲೆಗಳನ್ನು ಸಂಗ್ರಹಿಸಿದ್ದು, ತನಿಖೆ ಚುರುಕುಗೊಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read