ಮೈಸೂರು: ಮೈಸೂರಿನ ಕೆ.ಆರ್.ನಗರದ ಕಾಂಗ್ರೆಸ್ ಮುಖಂಡ ಮಹಿಳೆಯೊಂದಿಗಿರುವ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ತಂದೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಲೋಹಿತ್ ಅಲಿಯಾಸ್ ರಾಜಿ ಎಂಬುವವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಆಗಿದೆ. ವೈಯಕ್ತಿಕ ಲಾಭಕ್ಕಾಗಿ ತನ್ನ ಮಗಳೊಂದಿಗೆ ಇರುವುದಾಗಿ ಬಿಂಬಿಸಿ ವಿಡಿಯೋ ಹರಿಬಿಟ್ಟು, ಈಗ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿಯ ತಂದೆ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ನೀಡಿದ್ದಾರೆ.
ತಂದೆಯ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈಗಾಗಲೇ ತನ್ನ ಮಗಳಿಗೆ ಮದುವೆಯಾಗಿದ್ದು, ಪತಿ-ಪತ್ನಿ ಅನ್ಯೋನ್ಯವಾಗಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ ದುರುದ್ದೇಶದಿಂದ ತನ್ನ ಮಗಳ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಗ್ರಾಮದ ಹಲವರಿಗೆ ವಾಟ್ಸಪ್ ಮೂಲಕ ಕಳುಹಿಸಿರುವುದಾಗಿ ದೂರು ನೀಡಿದ್ದಾರೆ. ಜಮೀನು ದಾರಿ ವಿಚಾರವಾಗಿ ನನಗೂ ಲೋಹಿತ್ ಗೂ ನಡೆದ ಜಗಳಕ್ಕೆ ಈಗ ದ್ವೇಷದ ಕಾರಣಕ್ಕೆ ಮಗಳ ವಿಡಿಯೋ ವೈರಲ್ ಮಾಡಿ ಕೊಲೆ ಬೆದರಿಕೆ ಹಾಕುತ್ತಿರುವುದಾಗಿ ದೂರಿದ್ದಾರೆ. ಸದ್ಯ ಎಫ್ ಐ ಆರ್ ದಾಖಲಿಸಿಲೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.