ವಿಜಯಪುರ : ಪೊಲೀಸರ ಗುಂಡೇಟಿಗೆ ನಟೋರಿಯಸ್ ರೌಡಿಶೀಟರ್ ಬಲಿಯಾದ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ.
ನಟೋರಿಯಸ್ ಹಂತಕನಾಗಿದ್ದ ಯೂನುಸ್ ಇಕ್ಲಾಸ್ ಪಟೇಲ್ ನನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.
ನಿನ್ನೆ ವ್ಯಕ್ತಿಯೋರ್ವರಿಗೆ ಚಾಕು ತೋರಿಸಿ ಅವರಿಂದ 25 ಸಾವಿರ ಹಣ ಕಸಿದು ಆತನ ಬೈಕ್ ಕಸಿದುಕೊಂಡು ಇಕ್ಲಾಸ್ ಪಟೇಲ್ ಎಸ್ಕೇಪ್ ಆಗಿದ್ದನು. ಈ ಸಂಬಂಧ ವಿಜಯಪುರದ ಗಾಂಧಿಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಚಾಕು ಇರಿದು ಹಲ್ಲೆಗೆ ಯತ್ನಿಸಿದ್ದಾನೆ . ಈ ವೇಳೆ ಆಯತಪ್ಪಿ ಇನ್ಸ್ಪಪೆಕ್ಟರ್ ಪ್ರದೀಪ್ ತಳಕೇರಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಪೊಲೀಸರು ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಆತನ ಪರಾರಿಯಾಗಲು ಯತ್ನಿಸಿದ ಹಿನ್ನೆಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಆತನನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಸದ್ಯ ಯೂನುಸ್ ಮೇಲೆ ಮೇಲೆ 2 ಕೊಲೆ ಪ್ರಕರಣಗಳಿದೆ.