ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಸಂಗೀತಾ ಭಟ್ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ . ಆಸ್ಪತ್ರೆಗೆ ದಾಖಲಾದ ನಟಿ ಸಂಗೀತಾ ಭಟ್ ಅವರಿಗೆ ಎದುರಾದ ಆರೋಗ್ಯ ಸಮಸ್ಯೆಯ ಬಗ್ಗೆ ಮಹಿಳೆಯರಿಗೆ ಸಂದೇಶ ರವಾನಿಸಿದ್ದಾರೆ.
ನಟಿ ಸಂಗೀತಾ ಭಟ್ ಋತು ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ವೈದ್ಯರನ್ನು ಸಂಪರ್ಕಿಸಿದಾಗ ಗರ್ಭಕೋಶದಲ್ಲಿ ಗೆಡ್ಡೆಯೊಂದು ಬೆಳೆದಿರುವುದು ತಿಳಿದು ಬಂದಿದೆ.
ಇದರಿಂದ ಸಂಗೀತಾ ಭಟ್ ಸಾಕಷ್ಟು ನೋವು, ರಕ್ತಸ್ರಾವ ಅನುಭವಿಸಿದ್ದರಂತೆ. ಕೊನೆಗೆ ವೈದ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಮಹಿಳೆಯರಿಗೆ ಸಂದೇಶ ರವಾನಿಸಿದ್ದಾರೆ.
ನೀವು ಮಹಿಳೆಯಾಗಿದ್ದರೆ ಅಥವಾ ನೀವು ಕಾಳಜಿ ವಹಿಸುವ ಮಹಿಳೆಯರನ್ನು ಹೊಂದಿರುವ ಪುರುಷರಾಗಿದ್ದರೆ ಈ ಪೋಸ್ಟ್ ಅನ್ನು ಸ್ಕಿಪ್ ಮಾಡಬೇಡಿ. ಇದು ಸಹಾನುಭೂತಿ ಅಥವಾ ಗಮನ ಸೆಳೆಯುವ ಪೋಸ್ಟ್ ಅಲ್ಲ, ಈ ಪೋಸ್ಟ್‌ನ ಉದ್ದೇಶವು ಅದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಅರಿವು ಮತ್ತು ಶಕ್ತಿಯ ಬಗ್ಗೆ ಮಾತ್ರ, ಎಲ್ಲ ಮಹಿಳೆಯರೂ ಗಮನ ಹರಿಸಿ ಎಂದು ಹೇಳಿದ್ದಾರೆ.
A post shared by Sangeetha Bhat Sudarshan(Mahalakshmi) (@sangeetha_bhat)