ವಿಜಯಪುರ: ಇತ್ತೀಚಿನ ದಿನಗಳಲ್ಲಿ ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳಿಗೆ ಶಾಲೆ ರಜೆ ಇದ್ದ ಕಾರಣಕ್ಕೆ ಕೃಷಿ ಹೊಂಡದ ಬಳಿ ಆಟವಾಡಲು ಹೋದ ಮೂವರು ಮಕ್ಕಳು ಕೃಷೀ ಹೊಂದಕ್ಕೆ ಬಿದ್ದು ಮೃತಪಟ್ತಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಮಿಂಚನಾಳ ತಾಂಡಾದ ಮಾದೇವ ನಗರದಲ್ಲಿ ಈ ದುರಂತ ಸಂಭವಿಸಿದೆ. ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಓರ್ವ ಬಾಲಕ ಹಾಗೂ ಇಬ್ಬರು ಬಾಲಕಯರು ಸಾವನ್ನಪ್ಪಿದ್ದಾರೆ.
ಕಾರ್ತಿಕ ರಾಠೋಡ್(7), ಶಿವಮ್ಮ ರಾಠೋಡ್ (8) ಹಾಗೂ ಸ್ವಪ್ನಾ ರಾಠೋಡ್ (12) ಮೃತ ಮಕ್ಕಳು. ಘಟನಾ ಸ್ಥಳಕ್ಕೆ ವಿಜಯಪುರ ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.