ಬಳ್ಳಾರಿ: ಬಳ್ಳಾರಿ ನಗರದ ಐತಿಹಾಸಿಕ ಕನಕ ದುರ್ಗ ದೇವಾಲಯದಲ್ಲಿ ಅರ್ಚಕರ ವಿರುದ್ಧವೇ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ., ಬೆಳ್ಳಿ ಕಳ್ಳತನವಾಗಿದ್ದು, ಅರ್ಚಕರಿಂದಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ದಸರಾ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಬಂದಿದ್ದರು. ಈ ವೇಳೆ ಸಾಕಷ್ಟು ಚಿನ್ನ, ಬೆಳ್ಳಿಗಳನ್ನು ಕಾಣಿಕೆಯಾಗಿ ನೀಡಿದ್ದರು. ಆದರೆ ಈಗ 55 ಗ್ರಾಂ ಚಿನ್ನ, 3080ಗ್ರಾಂ ಬೆಳ್ಳಿ, 511 ಸೀರೆ ಕಳ್ಳತನವಾಗಿದೆ. ಭಕ್ತರು ನೀಡಿದ್ದ ಕಾಣಿಕೆಯನ್ನು ಅರ್ಚಕರೇ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ.
ಕನಕ ದುರ್ಗಮ್ಮ ದೇವಸ್ಥಾನದ ಅರ್ಚಕ ಗಾದೆಪ್ಪನ ವಿರುದ್ಧ ದೂರು ದಾಖಲಾಗಿದ್ದು, ದೇವಸ್ಥಾನದ ನಾಲ್ವರು ಅರ್ಚಕರಿಗೆ ಧಾರ್ಮಿಕ ದತ್ತಿ ಇಲಾಖೆಯ ಇಒ ನೋಟಿಸ್ ಜಾರಿ ಮಾಡಿದ್ದಾರೆ. 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಕಾಣಿಕೆ ವಾಪಸ್ ನೀಡುವಂತೆ ಸೂಚಿಸಿದ್ದಾರೆ.
ನಿಯಮ ಬಾಹಿರವಾಗಿ ಅರ್ಚನೆ, ಅಭಿಷೇಕದ ಹಣ ಪಡೆದಿರುವ ಆರೋಪವೂ ಇದ್ದು ದೇವಸ್ಥಾನದಿಂದ ನಿಯಮ ಬಾಹಿರವಾಗಿ ಕೊಂಡೊಯ್ದ ಕಾಣಿಕೆಗಳನ್ನು ಹಿಂತಿರುಗಿಸುವಂತೆ ಸೂಚಿಸಲಾಗಿದೆ.