ಕೋಲಾರ : ಕೋಲಾರದಲ್ಲಿ ಜಾತಿ ಗಣತಿ ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆಯಾಗಿದ್ದಾರೆ.
ಕೋಲಾರ ತಾಲೂಕಿನ ಬಿ ಹೊಸಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಅಖ್ತರ್ ಬೇಗಂ ಕೋಲಾರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಯಾಗಿದ್ದರು.
ನರಸಾಪುರದಲ್ಲಿ ಸಮೀಕ್ಷೆ ಕಾರ್ಯ ನಡೆಸಿದ ಬಳಿಕ ನಾಪತ್ತೆಯಾಗಿದ್ದರು. 2 ದಿನಗಳಿಂದ ನಾಪತ್ತೆಯಾಗಿದ್ದ ಶಿಕ್ಷಕಿ ಸುಳಿವೇ ಇರಲಿಲ್ಲ. ಈ ಸಂಬಂಧ ಕೋಲಾರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೂಡ ದಾಖಲಾಗಿತ್ತು. ಆದರೀಗ ಅವರ ಶವ ಪತ್ತೆಯಾಗಿದೆ. ಕೆಜಿಎಫ್ ತಾಲೂಕಿನ ಐಪಲ್ಲಿ ಕೆರೆಯಲ್ಲಿ ಅಖ್ತರ್ ಶವ ಪತ್ತೆಯಾಗಿದೆ. ಶಿಕ್ಷಕಿಯನ್ನು ಯಾರಾದರೂ ಕೊಲೆ ಮಾಡಿದ್ರಾ ಅವರೇ ಆತ್ಮಹತ್ಯೆ ಮಾಡಿಕೊಂಡರಾ ಎಂಬುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.